Publish Date: Fri, 03 Jan 2020 (12:08 IST)
Updated Date: Fri, 03 Jan 2020 (12:09 IST)
ಬೆಂಗಳೂರು : ಪ್ರಧಾನಿ ಮೋದಿಯವರ ರಾಜ್ಯ ಪ್ರವಾಸವನ್ನು ನಾವು ಸ್ವಾಗತಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಪ್ರವಾಹ ಬಂದಿತ್ತು. ಆಗ ರಾಜ್ಯದ ಜನರು ಕಷ್ಟ ಅನುಭವಿಸಿದ್ದರು. ಪ್ರವಾಹದಿಂದ ಬಹಳಷ್ಟು ಜನರು ಮನೆ ಕಳೆದುಕೊಂಡರು. ಆ ವೇಳೆ ಪ್ರಧಾನಿ ಮೋದಿ ರಾಜ್ಯಕ್ಕೆ ಬರಲೇ ಇಲ್ಲ. ಕನಿಷ್ಠ ಟ್ವೀಟ್ ಮಾಡಿಯೂ ಕಷ್ಟ ಸುಖದ ಬಗ್ಗೆ ಕೇಳಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಅಲ್ಲದೇ ಪ್ರಧಾನಿಯಾದವರು ದೇಶದ ಜನರ ಕಷ್ಟ ಸುಖ ಕೇಳಬೇಕು. ಆದ್ರೆ ಪ್ರಧಾನಿ ಮದಿ ಅಂತಹ ಕೆಲಸ ಮಾಡಲೇ ಇಲ್ಲ. ಈ ಹಿಂದಿನ ಪ್ರಧಾನಿಗಳು ಕಷ್ಟ ಸುಖವನ್ನು ಆಲಿಸಿದ್ದರು. ಆದ್ರೆ ಪ್ರಧಾನಿ ಮೋದಿ ಆ ಕೆಲಸ ಮಾಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.