Publish Date: Mon, 13 May 2019 (14:29 IST)
Updated Date: Mon, 13 May 2019 (14:32 IST)
ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಬ್ಬ ಹುಚ್ಚ ಅಂತ ಕೆ.ಎಸ್. ಈಶ್ವರಪ್ಪ ಟೀಕೆ ಮಾಡಿದ್ದಾರೆ.
ವಿಜಯಪುರದಲ್ಲಿ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಒಬ್ಬನೇ ಹಿಂದುಳಿದವರು. ಎಲ್ಲಾ ತನಗೇ ಸಿಗಬೇಕು ಅನ್ನೊ ಬುದ್ದಿ ಇದೆ ಅವರಿಗೆ. ಕಾಂಗ್ರೆಸ್ ನಲ್ಲಿ ಹೆಳೋರು ಕೆಳೋರು ಯಾರೂ ಇಲ್ಲ. ಎಲ್ಲಾ ಸಿದ್ದರಾಮಯ್ಯನದೆ ಇದೆ.
ನಾನೆ ಸಿಎಂ ಆಗ್ತಿನಿ ಅಂತಾರೆ. ನೀನು ಹೀಗೆ ಹುಚ್ಚುಚ್ಚಾಗಿ ಆಡಬಾರದು ಎಂದು ಯಾರೂ ಹೇಳಿಲ್ಲ ಅವರಿಗೆ. ಬೀರೇಶ್ವರ ದೇವರು ಅವರಿಗೆ ಒಳ್ಳೆ ಬುದ್ದಿ ಕೊಡಲಿ. ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ ಎಂದರು.
ಇನ್ನು ಬಿ.ಎಸ್.ಯಡಿಯೂರಪ್ಪ ಬಳಿಕ ನಾನೇ ಸಿಎಂ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಯತ್ನಾಳ ಇನ್ನೊಂದು ಹುಚ್ಚ ಎಂದು ಛೇಡಿಸಿದ್ದಾರೆ.