Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೈಕಮಾಂಡ್ ಎದುರು ಸಿದ್ದರಾಮಯ್ಯ ವೀಕ್ ಆಗಿದಾರೆ-ಬಸವರಾಜ ಬೊಮ್ಮಾಯಿ

ಹೈಕಮಾಂಡ್ ಎದುರು ಸಿದ್ದರಾಮಯ್ಯ ವೀಕ್ ಆಗಿದಾರೆ-ಬಸವರಾಜ ಬೊಮ್ಮಾಯಿ
bangalore , ಗುರುವಾರ, 3 ಆಗಸ್ಟ್ 2023 (21:00 IST)
ದಿಲ್ಲಿಯಲ್ಲಿ ಕಾಂಗ್ರೆಸ್ ಸಭೆಗೆ ನಮ್ಮ ಅಭ್ಯಂತರ ಇಲ್ಲ.ಆದರೆ ಇಡಿ ಸಂಪುಟ ಸದಸ್ಯರು ಹೋಗಿ ಮೀಟಿಂಗ್ ಮಾಡಿದ್ದಾರೆ .ಇತಿಹಾಸದಲ್ಲಿ ಹೀಗೆ ನಡೆದಿಲ್ಲ.ಸುರ್ಜೆವಾಲಾ ಇಲ್ಲಿ ಸರ್ಕಾರಿ ಸಭೆಯಲ್ಲಿ ಪಾಲ್ಗೊಳ್ತಾರೆ.ಇದು ಜನರಿಗೆ ಮಾಡುವ ಅವಮಾನ .ಕೇವಲ ಎರಡೇ ತಿಂಗಳಲ್ಲಿ ದಿಲ್ಲಿಯಲ್ಲಿ ಇಂತಹ ಸಭೆ ಏಕೆ ?ಸಂಪುಟದಲ್ಲಿ, ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ.ವರ್ಗಾವಣೆ ದಂಧೆ ನಡೀತಾ ಇದೆ .ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಸ್ಪಷ್ಟವಾಗಿ ಕಾಣ್ತಿದೆ .ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಈ ವೇಳೆ ಸರ್ಕಾರದ ನಡೆ ಸರಿಯಲ್ಲ.ಹೈಕಮಾಂಡ್ ಎದುರು ಸಿದ್ದರಾಮಯ್ಯ ವೀಕ್ ಆಗಿದಾರೆ.ಎಲ್ಲದರಲ್ಲೂ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ಮಾಡ್ತಿದೆ.ದಿಲ್ಲಿಯಿಂದ ರಾಜ್ಯದ ಆಡಳಿತ ನಡಿತಾ ಇದೆ .ಚುನಾವಣೆ ಪೂರ್ವ ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡಿದ್ರು.ಈಗ ದಿಲ್ಲಿಯಲ್ಲಿ ಹೈಕಮಾಂಡ್ ಗೆ ಅಡಿಯಾಳಾಗಿದ್ದಾರೆ .ಇದು ಕನ್ನಡದ ಅಸ್ಮಿತೆಗೆ ಧಕ್ಕೆ ಅಲ್ವಾ ? ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
 
ಇನ್ನೂ ದೆಹಲಿಯ ಕಾಂಗ್ರೆಸ್ ನಾಯಕರ  ಸಭೆ ವಿಚಾರ‌ವಾಗಿ ಬೆಂಗಳೂರಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ಕಾಂಗ್ರೆಸ್ ನಿಂದ ಮೊದಲಿಂದಲೂ ಎಲ್ಲವೂ ಸರಿಯಲ್ಲ ಎಂಬುದು ಸ್ಪಷ್ಟ ವಾಗ್ತಿದೆ.ವರ್ಗಾವಣೆ ದಂಧೆ ಹಗಲು ದರೋಡೆ ಆಗಿದೆ.ಸಚಿವರು ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲ.ಭ್ರಷ್ಟಾಚಾರ ಸ್ಪಷ್ಟ ವಾಗಿ ಕಾಣಿಸ್ತಿದೆ.ಇದು ಆಡಳಿತದ ಮೇಲೆ ಪರಿಣಾಮ ಬೀಳ್ತಿದೆ.ಸಿದ್ದರಾಮಯ್ಯ ಒನ್, ಮತ್ತೆ ಸಿದ್ದರಾಮಯ್ಯ ಟು ನಲ್ಲಿ ಬಹಳ ವ್ಯತ್ಯಾಸ ಇದೆ.ಮೊದಲಿದ್ದ ಸಿದ್ದರಾಮಯ್ಯ ಬೇರೆ, ಇವಾಗಿನ ಸಿದ್ದರಾಮಯ್ಯ ಬೇರೆ.ಸಿದ್ದರಾಮಯ್ಯ ವರಿಷ್ಠರ ಬಳಿ ತಲೆ ಬಾಗಿರೋದು ಬಹಳ ವಿರಳ.ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ
 
ಸಿದ್ದರಾಮಯ್ಯ ನೇಚರ್ ಬೇರೆ, ಅವರು ಮೊದಲಿನ ತರ ಸಿಡಿದೇಳ್ತಿಲ್ಲ.ಇವಾಗ ವರಿಷ್ಠರು ಮಾತನ್ನು ಚಾಚು ತಪ್ಪದೇ ಪಾಲಿಸ್ತಿದ್ದಾರೆ.ಸರ್ಕಾರದಲ್ಲಿ ಹೈಕಮಾಂಡ್ ನಿಂದಲೂ ಹಸ್ತಕ್ಷೇಪ ನಡೀತ್ತಿದೆ.ಸರ್ಕಾರ ರಿಮೋಟ್ ಕಾಂಗ್ರೆಸ್ ನಿಂದ ಹೈಕಮಾಂಡ್ ಕೈಯಲ್ಲಿದೆ.ನಿನ್ನೆಯ ಸಭೆಯಲ್ಲಿ ಕಪ್ಪ ಕಾಣಿಕೆ ಬಗ್ಗೆ ಚರ್ಚೆ ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರ ಬಂದಾಗ್ಲಿಂದ ಹಿಡಿದು ಕಪ್ಪ ಕಾಣಿಕೆ ಹೈಕಮಾಂಡ್ ಗೆ ಕೊಡೋದು ಹೊಸದಲ್ಲ.ಇವಾಗ ನಿನ್ನೆ ನಡೆದ ಸಭೆಯಲ್ಲೂ ಮುಂದುವರಿದಿದೆ.
 
ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅಸಮಧಾನ ವಿಚಾರವಾಗಿ ಬೊಮ್ಮಯಿ ಪ್ರತಿಕ್ರಿಯಿಸಿದ್ದು,ಬಸವರಾಜ್ ರಾಯರೆಡ್ಡಿ, ದೊಡ್ಡ ಮೇದಾವಿಗಳು ಅವರ ಮಾತಿಗೆ ವಿಶ್ಲೇಷಣೆ ಬಗ್ಗೆ ಅವರೇ ಹೇಳಬೇಕು ಎಂದು  ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರ್ಟ್ ಸರ್ಕ್ಯೂಟ್​ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ