Publish Date: Thu, 03 Aug 2023 (20:40 IST)
Updated Date: Thu, 03 Aug 2023 (19:11 IST)
ಶಾರ್ಟ್ ಸರ್ಕ್ಯೂಟ್ನಿಂದಾಗಿ 2 ಎಕರೆಯಲ್ಲಿದ್ದ ಕಬ್ಬಿನ ಗದ್ದೆ ಜೊತೆಗೆ ತೆಂಗಿನ ಮರಗಳು ನಾಶವಾಗಿರುವ ಘಟನೆ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಪುರ ಗ್ರಾಮದಲ್ಲಿ ನಡೆದಿದೆ. ಅರಳಾಪುರ ಗ್ರಾಮದ ನಾಗೇಂದ್ರಗೌಡ ಎಂಬುವವರಿಗೆ ಸೇರಿದ ಕಬ್ಬಿನಗದ್ದೆಯಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಕಬ್ಬಿನ ಗದ್ದೆ ಜೊತೆಗೆ ತೆಂಗಿನ ಮರಗಳಿಗೂ ಸಹ ಬೆಂಕಿ ತಗುಲಿ ನಾಶವಾಗಿದ್ದು, ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.