Publish Date: Sat, 10 Apr 2021 (12:01 IST)
Updated Date: Sat, 10 Apr 2021 (12:03 IST)
ಬೆಂಗಳೂರು : ದೆಹಲಿಯಲ್ಲೊಬ್ಬರು ಪಾಳೇಗಾರರಾಜ್ಯದಲ್ಲೊಬ್ಬರು ಮಾಂಡಲಿಕ ಭಲೇ ಜೋಡಿ ಎಂದು ರಾಜ್ಯದಲ್ಲಿ ನೈಟ್ ಕರ್ಪ್ಯೂ ಬಗ್ಗೆ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನೈಟ್ ಕರ್ಪ್ಯೂ ಹೇರಿಕೆ ಬಾಲಿಶವಾದ ಕ್ರಮ. ಕೊರೊನಾ ಓಡಿಸಲು ತಟ್ಟೆ ಬಡಿದಷ್ಟೆ ಬಾಲಿಶ. ರಾತ್ರಿ ತೆರೆದಿರುವ ಹೋಟೆಲ್ , ಚಿತ್ರಮಂದಿರ , ಅಂಗಡಿ ಮುಗ್ಗಟ್ಟು ಮುಚ್ಚಿದರೆ ಸಾಲದೇ? ರಾತ್ರಿ ಕರ್ಪ್ಯೂವಿನ ನಾಟಕ ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಿಎಂ ಮೊದಲು ಸುರಕ್ಷತಾ ಕ್ರಮ ಕೈಗೊಳ್ಳಲಿ. ಜೊತೆಗೆ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು. ತಕ್ಷಣ ಚಿಕಿತ್ಸೆ ಲಭ್ಯವಿರುವಂತೆ ನೋಡಿಕೊಳ್ಳಿ. ವ್ಯಾಕ್ಸಿನ್ ಕೊರತೆಯ ದೂರು ಕೇಳಿ ಬರುತ್ತಿದೆ. ಗಿಮಿಕ್ ಗಳನ್ನು ಬಿಟ್ಟು ಈ ಕಡೆಗೆ ಗಮನಹರಿಸಿ. ಕೊರೊನಾ ನಿಯಂತ್ರಣ ಹೆಸರಲ್ಲಿ ತುಘಲಕ್ ದರ್ಬಾರ್. ಕೆಲ ಡಿಸಿಗಳು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆಎಂದು ಅವರು ತಿಳಿಸಿದ್ದಾರೆ.