Publish Date: Sat, 10 Apr 2021 (07:14 IST)
Updated Date: Sat, 10 Apr 2021 (07:15 IST)
ಬೆಂಗಳೂರು : ಪತಿ ಪತ್ನಿಯರ ನಡುವೆ ಹೊಂದಾಣಿಕೆ ಇಲ್ಲದಿದ್ದಾಗ ಅವರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಸಣ‍್ಣ ಪುಟ್ಟ ವಿಚಾರಕ್ಕೂ ಜಗಳ, ಗಲಾಟೆ ಮಾಡುವುದರ ಮೂಲಕ ಜೀವನದಲ್ಲಿ ನೆಮ್ಮದಿ ಇಲ್ಲದಂತೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಪರಿಹಾರ ಕ್ರಮ ಕೈಗೊಳ್ಳಿ.
ಶುಕ್ರ ಗ್ರಹವು ವೈವಾಹಿಕ ಜೀವನದ ಸಂಕೇತವಾಗಿದೆ. ಹಾಗಾಗಿ ನೀವು ಶುಕ್ರವನ್ನು ಬಲಪಡಿಸಲು ಬಿಳಿ ನೀಲಮಣಿಯನ್ನು ಧರಿಸಿಕೊಳ್ಳಬೇಕು. ಇದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಸಿಗುತ್ತದೆ.
ಹಾಗೇ ಶಿವ ಪಾರ್ವತಿಯ ಆಶೀರ್ವಾದದಿಂದ ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆ ಕಾಡುವುದಿಲ್ಲ. ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ‍್ಳಲು ಶಿವ ಮತ್ತು ಪಾವರ್ತಿ ದೇವಿಯ ವಿಶೇಷ ಪೂಜೆಯನ್ನು ಮಾಡಬೇಕು. ಹದಿನಾರು ಸೋಮವಾರ ಉಪವಾಸ ವ್ರತ ಮಾಡಿದರೆ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಅಡೆತಡೆಗಳ ನಿವಾರಣೆಯಾಗುತ್ತದೆ.