Publish Date: Tue, 16 Oct 2018 (15:12 IST)
Updated Date: Tue, 16 Oct 2018 (15:14 IST)
ಬಳ್ಳಾರಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ, ಎಲ್ಲಾ ವಿಚಾರ ಮಾಡಿಯೇ ಅಭ್ಯರ್ಥಿಯನ್ನ ಕಣಕ್ಕಿಳಿಸಿರೋದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಳ್ಳಾರಿ ಕಾಂಗ್ರೆಸ್ ಮುಖಂಡರಲ್ಲಿ ಯಾರಲ್ಲೂ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡ್ತಾರೆ. ಪಕ್ಷದ ಅಭ್ಯರ್ಥಿ ಆಯ್ಕೆ ಸರಿಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು,
ಮದ್ಯಾಹ್ನ ಕಾಂಗ್ರೆಸ್ ಗೆ ಶಾಕ್ ಕಾದಿದೆ ಎಂಬ ಬಿಎಸ್.ವೈ ಹೇಳಿಕೆ ವಿಚಾರಕ್ಕೆ ಕಿಡಿಕಾರಿದರು. ಯಡಿಯೂರಪ್ಪ ಒಬ್ಬ ಸುಳ್ಳುಗಾರ, ಏನು ಆಗಲ್ಲ ಎಂದರು.
ಬಿಜೆಪಿ ಅವರಿಗೆ ದೊಡ್ಡ ಶಾಕ್ ಕಾದಿದೆ. ಇಷ್ಟು ದಿನ ಸರ್ಕಾರ ಬೀಳುತ್ತೆ ಎಂದು ಹೇಳ್ತಿದ್ರು, ಸರ್ಕಾರ ಬಿತ್ತಾ? ಎಂದು ಪ್ರಶ್ನಿಸಿದರು.
ಮೈತ್ರಿ ಸರ್ಕಾರದ ಅಭ್ಯರ್ಥಿಗಳ ಬಗ್ಗೆ ಭರ್ಜರಿ ಬ್ಯಾಟಿಂಗ್ ಮಾಡಿದ ಸಿದ್ಧರಾಮಯ್ಯ, ಒಂದಿಷ್ಟು ಕಡೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕಿಲ್ಲ, ಒಂದಿಷ್ಟು ಕಡೆ ನಾವು ಅಭ್ಯರ್ಥಿಗಳನ್ನ ಹಾಕಿಲ್ಲ ಎಂದು ಹೇಳಿದರು.