Publish Date: Tue, 16 Oct 2018 (13:48 IST)
Updated Date: Tue, 16 Oct 2018 (14:03 IST)
ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಬಂಡಾಯ ಭುಗಿಲೆದ್ದಿದೆ. ಮುಖಂಡ ಸುಶೀಲ್ ಕುಮಾರ ಬೆಳಗಲಿ ಅವರನ್ನು ಪಕ್ಷದಲ್ಲೆ ಉಳಿಸಿಕೊಳ್ಳಲು ಬಸವರಾಜ ನ್ಯಾಮಗೌಡರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸುಶೀಲ್ ಕುಮಾರ್ ಬೆಳಗಲಿ ಪಕ್ಷದಲ್ಲೇ ಉಳಿಸಿಕೊಳ್ಳಲು ಬಸವರಾಜ್ ನ್ಯಾಮಗೌಡರ್ ತೀವ್ರ ವಿರೋಧ ವ್ಯಕ್ತಪಡಿಸಿ ಕಣ್ಣೀರು ಸುರಿಸಿದ್ದಾರೆ. ಬಸವರಾಜ್ ನ್ಯಾಮಗೌಡರ್ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರ್ ಸಹೋದರರಾಗಿದ್ದಾರೆ.
ಮುಖಂಡರ ಒತ್ತಡಕ್ಕೆ ಬಸವರಾಜ್ ನ್ಯಾಮಗೌಡ ಮಣಿಯುತ್ತಿಲ್ಲ. ಹೀಗಾಗಿ ಪ್ರಮುಖರಾದ ಪಾರಸ್ಮಲ್ ಜೈನ್, ಡಿ.ಆರ್. ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಮುಖಂಡರೆದುರು ಬಸವರಾಜ್ ನ್ಯಾಮಗೌಡರ ಕಣ್ಣೀರಿಟ್ಟರು.
ಕಾಂಗ್ರೆಸ್ ಅಸಮಾಧಾನಿತ ಸುಶೀಲ್ ಕುಮಾರ್ ಬೆಳಗಲಿಯನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ವಿರೋಧ ವ್ಯಕ್ತಪಡಿಸಿ ಕಣ್ಣೀರು ಸುರಿಸಿದರು. ಈ ಮೂಲಕ ಬಂಡಾಯ ಮತ್ತಷ್ಟು ಕಾವೇರುವ ಲಕ್ಷಣಗಳು ಗೋಚರಿಸಿವೆ.
Jagadeesh
Publish Date: Tue, 16 Oct 2018 (13:48 IST)
Updated Date: Tue, 16 Oct 2018 (14:03 IST)