Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅದೃಷ್ಟವಂತರಾಗಲು ವಜ್ರವನ್ನು ಯಾರು? ಯಾವಾಗ ಧರಿಸಬೇಕು ಗೊತ್ತಾ?

ಅದೃಷ್ಟವಂತರಾಗಲು ವಜ್ರವನ್ನು ಯಾರು? ಯಾವಾಗ ಧರಿಸಬೇಕು ಗೊತ್ತಾ?
ಬೆಂಗಳೂರು , ಶುಕ್ರವಾರ, 26 ಮಾರ್ಚ್ 2021 (06:45 IST)
ಬೆಂಗಳೂರು : ವಜ್ರ ಎಲ್ಲರಿಗೂ ಪ್ರಿಯವಾದದ್ದು. ಇದನ್ನು ಮಹಿಳೆಯರು ಧರಿಸಲು ಹೆಚ್ಚು ಇಷ್ಟಪಡುತ್ತಾರೆ. ಆದರೆ ವಜ್ರವನ್ನು ಎಲ್ಲರೂ ಧರಿಸುವ ಹಾಗಿಲ್ಲ. ಯಾಕೆಂದರೆ ಇದರಿಂದ  ಜೀವನದಲ್ಲಿ ಹಾನಿ ಸಂಭವಿಸುತ್ತದೆ. ಇದು ಒಬ್ಬರಿಗೆ ಅದೃಷ್ಟ ತಂದರೆ ಇನ್ನೊಬ್ಬರಿಗೆ ದುರಾದೃಷ್ಟ ತರುತ್ತದೆ. ಹಾಗಾಗಿ ಯಾರು ಇದನ್ನು ಧರಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ವಜ್ರ ಶುಕ್ರಗ್ರಹದ ರತ್ನವಾಗಿದೆ. ಇದನ್ನು ವೃಷಭ ಮತ್ತು ತುಲಾ ರಾಶಿಯಲ್ಲಿ ಹುಟ್ಟಿದವರು ಮಾತ್ರ ಧರಿಸಬಹುದು. ಹಾಗೇ ಶುಕ್ರ ಶುಭ ಸ್ಥಾನದಲ್ಲಿರುವವರು ವಜ್ರವನ್ನು ಧರಿಸಬಹುದು. 21 ವರ್ಷಕ್ಕಿಂತ ಕಡಿಮೆ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟವರು ವಜ್ರವನ್ನು ಧರಿಸಬಾರದು. ಹಾಗೇ ಮಾಣಿಕ್ಯ, ಮುತ್ತುಗಳು, ಹವಳ ಮತ್ತು  ಹಳದಿ ನೀಲಮಣಿಯನ್ನು ವಜ್ರದೊಂದಿಗೆ ಧರಿಸಬಾರದು.

ಹಾಗೇ ವಜ್ರವನ್ನು ಶುಕ್ಷ ಪಕ್ಷದ ಶುಕ್ರವಾರದಂದು ಬೆಳಿಗ್ಗೆ ಸ್ನಾನ ಮಾಡಿದ ನಂತರ ಅದನ್ನು ಧೂಪದ್ರವ್ಯಗಳಿಂದ ಪೂಜಿಸಿ     “ ಓಂ ಶುಕ್ರಾಯ ನಮಃ” ಎಂಬ ಮಂತ್ರವನ್ನು 108 ಬಾರಿ ಜಪಿಸಿ ಬಳಿಕ ಉಂಗುರವನ್ನು ಮಧ್ಯೆ ಬೆರಳಿನಲ್ಲಿ ಧರಿಸಿ. ಇದನ್ನು 7 ವರ್ಷದ ಬಳಿಕ ಬದಲಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ