ಮಾಜಿ CM HD ಕುಮಾರಸ್ವಾಮಿ ಹೇಳಿರುವಂತೆ ಟೆಂಟಲ್ಲಿ ನೀಲಿ ಸಿನೆಮಾ ತೋರಿಸುವಂತಹ ಕೀಳು ಮಟ್ಟಕ್ಕೆ ಇಳಿದಿಲ್ಲ. ಅಂತಹದ್ದೇನಾದರೂ ನಾನು ಮಾಡಿದನ್ನು ಸಾಬೀತು ಪಡಿಸಿದರೆ ಈ ಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.ಒಬ್ಬ ಮಾಜಿ ಮುಖ್ಯಮಂತ್ರಿಯ ಮಾತುಗಳಿಗೆ ತೂಕ, ಗೌರವ ಇರಬೇಕು. ಏನೇನೋ ಮಾತನಾಡಿದರೆ ಜನ ನೋಡಿ ನಗುತ್ತಾರೆ ಅಷ್ಟೆ ಎಂದ್ರು.