Publish Date: Thu, 02 Jun 2022 (08:40 IST)
Updated Date: Thu, 02 Jun 2022 (08:38 IST)
ತುಮಕೂರು : ದಾಳಿ ಮಾಡಿದವರು ಸಿವಿಲ್ ಉಗ್ರಗಾಮಿಗಳು, ಅವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪಟೂರು ಪೊಲೀಸರು 15ಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಸೊಗಡು ಶಿವಣ್ಣ ಅವರು ನಾಗೇಶ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾಳಿ ಮಾಡಿದವರು ಸಿವಿಲ್ ಉಗ್ರಗಾಮಿಗಳು.
ಅವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು. ಇಂಟಲಿಜೆನ್ಸಿ ವಿಫಲ ಆಗಿರೋದು ಇಲ್ಲಿ ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಾಳಿ ಮಾಡಿದವರು ಯಾರೂ ಈ ಊರಿನವರಲ್ಲ.
ಬೇರೆ ಊರಿನಿಂದ ಬಂದವರು. ಈಗಾಗಲೇ 15 ಜನ ಅರೆಸ್ಟ್ ಮಾಡಲಾಗಿದೆ. ಅದರಲ್ಲಿ 6 ಜನ ಮುಸ್ಲಿಂ ಯುವಕರಿದ್ದಾರೆ. ಇವರುಗಳು ಮಾರಕಾಸ್ತ್ರ ತಂದಿರುವ ಶಂಕೆ ಇದೆ ಎಂದು ಮಾಹಿತಿ ಕೊಟ್ಟರು.
Ramya kosira
Publish Date: Thu, 02 Jun 2022 (08:40 IST)
Updated Date: Thu, 02 Jun 2022 (08:38 IST)