Publish Date: Thu, 26 May 2022 (16:37 IST)
Updated Date: Thu, 26 May 2022 (16:41 IST)
ಶಿಗ್ಗಾಂವಿಯ ಶೂಟೌಟ್ ಪ್ರಕರಣ ಮಾಸುವ ಮುನ್ನವೇ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದಲ್ಲಿ ಫೈರಿಂಗ್ ನಡೆದಿದೆ.
ಗ್ರಾಮದ ಮಹಿಳೆ ಸಲ್ಮಾ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಬೈಕ್ ಮೇಲೆ ಬಂದಿದ್ದ ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಅದೇ ವೇಳೆಯಲ್ಲಿ ಕರೆಂಟ್ ಹೋಗಿದ್ದು, ಕತ್ತಲಾಗಿದ್ದರಿಂದ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮಹಿಳೆ ಮನೆಯೊಳಗೆ ಓಡಿ ಹೋಗಿದ್ದಾಳೆ. ಇದರಿಂದಾಗಿ ಮನೆಯ ಗೋಡೆಗೆ ಒಳಗೆ ಗುಂಡು ತಾಗಿದೆ.
ಗುಂಡಿನ ದಾಳಿಯಲ್ಲಿ ಮಹಿಳೆ ಹಾಗೂ ಮಹಿಳೆಯ ಮನೆಯವರು 14 ಜನರು ಪಾರಾಗಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಬೆಚ್ಚಿಬಿದ್ದ ಅಲ್ಲಿನ ಜನರು ಸಲ್ಮಾಳ ಮನೆ ಬಳಿ ಜಮಾಯಿಸಿದ್ದಾರೆ. ಅಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ದುಷ್ಕರ್ಮಿಗಳ ಬಂದೂಕಿನಿಂದ ಒಂದು ಸುತ್ತು ಗುಂಡು ಹಾರಿದೆ.
ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್‍ಪಿ ವಿಜಯ್‍ಕುಮಾರ್ ಸೇರಿದಂತೆ ಶಿಗ್ಗಾಂವಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
geetha
Publish Date: Thu, 26 May 2022 (16:37 IST)
Updated Date: Thu, 26 May 2022 (16:41 IST)