Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ನೀಡಿದ್ದು, ಆದರೆ ಇಂದು ವಿಚಾರಣೆಗೆ ಹಾಜರಾಗಲು ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಇಡಿ ವಿಚಾರಣೆಗೆ ದೆಹಲಿಗೆ ಹೋಗಬೇಕಿತ್ತು. ಆದರೆ ನಿನ್ನೆ ಖರ್ಗೆಯವರ ಕಾರ್ಯಕ್ರಮ ಇತ್ತು. ಇಂದು ವಿನಯ್ ಕುಲಕರ್ಣಿಯವರ ಪೂರ್ವ ನಿಯೋಜಿತ ಕಾರ್ಯಕ್ರಮವಿದೆ.
ಆದ್ದರಿಂದ ಇಡಿ ವಿಚಾರಣೆಗೆ ಹಾಜರಾಗಲು ಆಗಲ್ಲ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ ಎಂದು ಮನವಿ ಮಾಡಿದ್ದೇನೆ. ಸಂಸದ ಡಿ.ಕೆ.ಸುರೇಶ್ ಇಂದು ಇಡಿ ವಿಚಾರಣೆಗೆ ಹಾಜರಾಗ್ತಾರೆ ಎಂದು ತಿಳಿಸಿದರು.