Webdunia - Bharat's app for daily news and videos

Install App

ಶಿರೂರಿನಲ್ಲಿ ಅರ್ಜುನ್ ಗಾಗಿ ಹುಡುಕಾಟ ಇನ್ನೂ ನಿಂತಿಲ್ಲ: ಲೇಟೆಸ್ಟ್ ಮಾಹಿತಿ

Krishnaveni K
ಶನಿವಾರ, 21 ಸೆಪ್ಟಂಬರ್ 2024 (10:45 IST)
ಶಿರೂರು: ಗುಡ್ಡ ಕುಸಿತದಿಂದ ಕಣ್ಮರೆಯಾಗಿದ್ದ ಕೇರಳ ಮೂಲದ ಟ್ರಕ್ ಡ್ರೈವರ್ ಅರ್ಜುನ್ ಗಾಗಿ ಹುಡುಕಾಟ ಇನ್ನೂ ನಿಂತಿಲ್ಲ. ಇಂದು ಮತ್ತೆ ಅರ್ಜುನ್ ಮೃತದೇಹಕ್ಕಾಗಿ ಹುಡುಕಾಟ ನಡೆಯಲಿದೆ.

ಜುಲೈ 16 ಕ್ಕೆ ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ಇದರಲ್ಲಿ ಕೆಲವರು ಸಾವನ್ನಪ್ಪಿದ್ದು, ಈ ಪೈಕಿ ಕೆಲವು ಮೃತದೇಹಗಳಷ್ಠೇ ಪತ್ತೆಯಾಗಿತ್ತು. ಕೇರಳ ಮೂಲದ ಟ್ರಕ್ ಡ್ರೈವರ್ ಅರ್ಜುನ್ ಕೂಡಾ ತಮ್ಮ ಟ್ರಕ್ ಸಮೇತ ನಾಪತ್ತೆಯಾಗಿದ್ದರು. ಅವರ ಮೃತದೇಹ ಇನ್ನೂ ಸಿಕ್ಕಿಲ್ಲ. ಆದರೆ ಅವರ ಲಾರಿಯ ಕೆಲವು ಅವಶೇಷಗಳು ನದಿ ನೀರಿನಲ್ಲಿ ಪತ್ತೆಯಾಗಿತ್ತು.

ಹಾಗಿದ್ದರೂ ಅವರ ಹುಡುಕಾಟ ಇನ್ನೂ ನಿಂತಿಲ್ಲ. ಕನಿಷ್ಠ ಅರ್ಜುನ್ ಮೃತದೇಹದ ಭಾಗವಾದರೂ ಹುಡುಕಿಕೊಡಿ ಎಂದು ಅವರ ಕುಟುಂಬಸ್ಥರು ಬೇಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಳೆ ತೀವ್ರವಾಗಿದ್ದರಿಂದ ನದಿ ನೀರಿನಲ್ಲಿ ಹುಡುಕಾಟ ಕಷ್ಟವಾಗಿತ್ತು. ಆದರೆ ಈಗ ಮಳೆ ಕಡಿಮೆಯಾಗಿದ್ದು, ನೀರು ತಿಳಿಯಾಗಿದೆ.

ಹೀಗಾಗಿ ನದಿ ನೀರಿನಲ್ಲಿ ಇಂದಿನಿಂದ ಮತ್ತೆ ಅರ್ಜುನ್ ಮೃತದೇಹಕ್ಕಾಗಿ ಹುಡುಕಾಟ ಆರಂಭವಾಗಲಿದೆ.  ನಾವಿಕರು ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಗಂಗಾವಳಿ ನದಿಯಲ್ಲಿ ಅರ್ಜುನ್ ಮೃತದೇಹಕ್ಕಾಗಿ ಹುಡುಕಾಟ ನಡೆಸಲಿದ್ದಾರೆ. ಈ ಬಾರಿ ಅವರ ಹುಡುಕಾಟಕ್ಕೆ ಫಲ ಸಿಗಲಿದೆ ಎಂಬ ವಿಶ್ವಾಸ ಕುಟುಂಬದವರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments