Publish Date: Thu, 14 Jun 2018 (14:46 IST)
Updated Date: Thu, 14 Jun 2018 (14:51 IST)
ಬೆಂಗಳೂರು : ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ನನಗಂತೂ ತಿಳಿದಿಲ್ಲ ಎಂದು ಕಾಂಗ್ರೆಸ್ ಸಮನ್ವಯ ಸಮಿತಿ ಅದ್ಯಕ್ಷ ಹಾಗು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದಕ್ಕೆ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ಬಿಜೆಪಿ ಮುಖಂಡೆ ಶಿಲ್ಪಾ ಗಣೇಶ್ ಅವರು ಟಾಂಗ್ ನೀಡಿದ್ದಾರೆ.
ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ‘ವಿಧಾನಸೌಧದಲ್ಲಿಯೂ ಭ್ರಷ್ಟಾಚಾರ ಇದೆ. ಅದನ್ನು ನೆನೆಸಿಕೊಂಡ್ರೆ ಭಯವಾಗುತ್ತೆ’ ಎನ್ನುವ ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾಧ್ಯಮದವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ ‘ವಿಧಾನಸೌಧದಲ್ಲಿ ನಾನಂತೂ ಭ್ರಷ್ಟಾಚಾರ ನೋಡಿಲ್ಲ. ಒಂದು ವೇಳೆ ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ಅದನ್ನು ನಿಲ್ಲಿಸಲು ಹೇಳಿ’ ಎಂದು ಹೇಳಿದ್ದರು. ಇದಕ್ಕೆ ಬಿಜೆಪಿ ಮುಖಂಡೆ ಶಿಲ್ಪಾ ಗಣೇಶ್ ಅವರು ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, 'ಹೇಗೆ ನೋಡೋಕೆ ಸಾಧ್ಯ ಹೇಳಿ.. ವಿಧಾನಸೌಧದಲ್ಲಿ ನೀವು ಎಚ್ಚರ ಇದ್ದಿದ್ದಕ್ಕಿಂತ ನಿದ್ದೆ ಮಾಡಿದ್ದೆ ಜಾಸ್ತಿ, ಅದಕ್ಕೆ ಏನು ತಿಳಿಲಿಲ್ಲ’ ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ