Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶರನ್ನವರಾತ್ರಿ ಸಂಭ್ರಮ, ಸಡಗರ ; ಯಾವ ಅಲಂಕಾರ?

ಶರನ್ನವರಾತ್ರಿ ಸಂಭ್ರಮ, ಸಡಗರ ; ಯಾವ ಅಲಂಕಾರ?
ಮಂಡ್ಯ , ಸೋಮವಾರ, 30 ಸೆಪ್ಟಂಬರ್ 2019 (17:35 IST)
ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ವಿಶೇಷ ಪೂಜೆ ಪುರಸ್ಕಾರಗಳು ಹಾಗೂ ಅಭಿಷೇಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.

ಮಂಡ್ಯ ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ವಿಶೇಷ ಪೂಜೆ ಪುರಸ್ಕಾರಗಳು ಹಾಗೂ ಅಭಿಷೇಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.
ಶರನ್ನವರಾತ್ರಿಯ ‌ಮೊದಲನೇ ದಿನ ವಿಭೂತಿ ಅಲಂಕಾರದಲ್ಲಿ ಮಿಂಚಿದ ತಾಯಿಯು ಎರಡನೇ ದಿನವಾದ ಇಂದು ಶ್ರೀಗಂಧದ ಅಲಂಕಾರದಲ್ಲಿ ಶೋಭಿತೆಯಾಗಿದ್ದಳು.

ನೂರಾರು ಭಕ್ತಾದಿಗಳು ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ದೇವಾಲಯದ 
ಆವರಣದಲ್ಲಿ ಬೆಳೆದಿದ್ದ ಗಿಡಗೆಂಟೆಗಳು ಹಾಗೂ ಕಸಕಡ್ಡಿಗಳನ್ನು ಆರಿಸಿ ಸ್ವಚ್ಛಗೊಳಿಸಿದರು. ಎನ್.ಎಸ್.ಎಸ್ ಅಧಿಕಾರಿ ಚಂದ್ರಶೇಖರ್ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ಹೆಚ್.ನಾರಾಯಣ ಶ್ರಮಧಾನದಲ್ಲಿ ಭಾಗವಹಿಸಿದ್ದರು.

 ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳು ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು




Share this Story:

Follow Webdunia kannada

ಮುಂದಿನ ಸುದ್ದಿ

ಬಂಡೀಪುರ ಸಂಚಾರ ಸಂಪೂರ್ಣ ಬಂದ್ ಮಾಡ್ತೇವೆ ಅಂದೋರಾರು?