ಮೈಸೂರು : ಮೈಸೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದ ಮಹಿಷ ದಸರಾ ಆಚರಣೆಗೆ ಬ್ರೇಕ್ ಬಿದ್ದಿದೆ.
ಪ್ರಗತಿಪರ ಚಿಂತಕರು ಹಾಗೂ ಮೂಲನಿವಾಸಿಗಳ ಸಂಘದಿಂದ ಆಯೋಜನೆಗೊಂಡಿದ್ದ ಮಹಿಷ ದಸರಾ ಆಚರಣೆಗೆ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಅವಕಾಶ ನೀಡಿರಲಿಲ್ಲ. ಆದರೂ ಮಹಿಷಾಸುರ ಪ್ರತಿಮೆಯ ಬಳಿ ಶಾಮಿಯಾನ ಹಾಕಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಸಂಸದ ಪ್ರತಾಪ್ ಸಿಂಹ ಪೊಲೀಸ್ ಆಯುಕ್ತ, ಡಿಸಿಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಪೊಲೀಸರೇ ನಿಮ್ಮಿಂದ ಇಂತಹ ಷಂಡತನ ನಿರೀಕ್ಷೆ ಮಾಡಿರಲಿಲ್ಲ’ ಎಂದು ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಅಲ್ಲದೇ ಮಹಿಷ ದಸರಾ ಆಚರಣೆಗೆ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಮಹಿಷ ದಸರಾ ಆಚರಣೆ ಮಾಡುವ ಸ್ಥಳದಲ್ಲಿ 144 ಸೆಕ್ಷನ್ ಹಾಕಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.