ಬಂಡೀಪುರದಲ್ಲಿ ರಾತ್ರಿ ಸಂಚಾರ ಬೇಡವೇ ಬೇಡ. ಪ್ರಸ್ತುತ ಇರುವ ಹಾಗೆ ಯತಾಸ್ಥಿತಿ ಕಾಪಾಡಬೇಕು. ಒಂದು ವೇಳೆ ಮತ್ತೆ ವೈನಾಡಿನಲ್ಲಿ ರಸ್ತೆ ವಿಚಾರವಾಗಿ ಗಲಭೆ ಎಬ್ಬಿಸಿದ್ದೇ ಆದ್ರೆ, ಬಂಡೀಪುರ ರಾತ್ರಿಯಲ್ಲ ಹಗಲು ಸಂಚಾರವೂ ಬಂದ್ ಮಾಡಬೇಕಾಗುತ್ತದೆ. ಹೀಗಂತ ಖಡಕ್ ಎಚ್ಚರಿಕೆ ನೀಡಲಾಗಿದೆ.
ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದು, ಕೇರಳಿಗರು ಮರದ ದಂಧೆ ನಡೆಸುವ ಸಲುವಾಗಿ ರಾತ್ರಿ ಸಂಚಾರ ಕೇಳುತ್ತಿದ್ದಾರೆ.
ಸಾವಿರಾರು ಕೋಟಿ ಲೂಟಿ ಮಾಡುವ ಮರದ ಮಾಫಿಯಾ ಇದೆ. ಬೇರೆ ರಸ್ತೆ ಮಾಡಿದ್ರೆ ಸಾಕಷ್ಟು ಅರಣ್ಯ ಪ್ರದೇಶ, ಪ್ರಾಣಿ- ಪಕ್ಷಿ ಸಂಕುಲ ನಾಶ ಆಗುತ್ತೆ. ಮೇಲ್ಸೇತುವೆ ನಿರ್ಮಾಣ ಮಾಡಿದ್ರೆ, ಹೆಚ್ಚು ಲೈಟ್ ಬೆಳಕಿನಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತೆ. ಅಂಡರ್ ಗ್ರೌಂಡ್ ರಸ್ತೆ ಮಾಡಿದ್ರೂ ಅದು ದೊಡ್ಡ ದುರಂತವಾಗುತ್ತೆ. ಹಾಗಾಗಿ ಬಂಡೀಪುರದಲ್ಲಿ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರ ಬೇಡ ಎಂದ್ರು.
ಕರ್ನಾಟಕ ಸರ್ಕಾರ ಬಹಳ ಗಂಭೀರವಾಗಿ ಚಿಂತನೆ ಮಾಡಬೇಕಿತ್ತು. ಇಲ್ಲಿ ಹೆಚ್ಚು ಹುಲಿಗಳಿವೆ, ಆನೆಗಳಿವೆ, ಇವೆಲ್ಲವನ್ನೂ ನಾವು ರಕ್ಷಿಸಬೇಕು. ಕೇರಳದವರಿಗೆ ಪ್ರಾಣಿ ಪಕ್ಷಿ ಅರಣ್ಯ ನಾಶವಾದ್ರೇನು, ಅವರಿಗೆ ರಸ್ತೆ ಬೇಕು ಅಂತಿದ್ದಾರೆ. ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ಅವಕಾಶ ಇಲ್ಲ. ಅದನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದ್ರು.