Publish Date: Fri, 14 Jul 2023 (19:00 IST)
Updated Date: Fri, 14 Jul 2023 (19:05 IST)
ಶಕ್ತಿ ಯೋಜನೆಯ ಪರಿಣಾಮ ಕಲಬುರಗಿ ಜಿಲ್ಲೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.. ಕಲಬುರಗಿ ನಗರದಿಂದ ಚೌಡಾಪುರ ಮಾರ್ಗವಾಗಿ ವಿವಿಧೆಡೆ ತೆರಳುವ ಬಸ್‌ಗಳು ಜನರಿಂದ ತುಂಬಿ ತುಳುಕುತ್ತಿವೆ. ಹತ್ತಾರು ಹಳ್ಳಿಗಳಿಗೆ ಸಂಚಾರ ಮಾಡುವ ಸಾರಿಗೆ ಬಸ್‌ಗಳು ಫುಲ್ ರಶ್ ಆಗಿದ್ದು, ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್ಗಳಲ್ಲಿ ದಿನನಿತ್ಯ 100 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರ ನಡುವೆ ಕಂಡಕ್ಟರ್ ಟಿಕೆಟ್ ಕೊಡಲು ಹರಸಾಹಸ ಪಡುತ್ತಿದ್ದಾರೆ.. ವಿದ್ಯಾರ್ಥಿಗಳು ಬಸ್ನ ಡೋರ್ಗಳಲ್ಲಿ ನಿಂತು ಪ್ರಯಾಣಿಸುತ್ತಿದ್ದಾರೆ. ಅಪಾಯ ಸಂಭವಿಸುವ ಮುನ್ನ ಸಾರಿಗೆ ಇಲಾಖೆ ಎಚ್ಚೆತ್ತು ಹೆಚ್ಚುವರಿ ಬಸ್ಗಳನ್ನು ಬಿಡುಗಡೆ ಮಾಡಬೇಕಿದೆ.