Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರ ಜೊತೆ ಪುರುಷರ ಒಡಾಟವೂ ಹೆಚ್ಚಳ

ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರ ಜೊತೆ ಪುರುಷರ ಒಡಾಟವೂ ಹೆಚ್ಚಳ
bangalore , ಶನಿವಾರ, 1 ಜುಲೈ 2023 (19:51 IST)
ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರೇ ಸಾರಿಗೆ ಬಸ್ ನಲ್ಲಿ ಓಡಾಡ್ತಿದ್ದಾರೆ.ಸಾರಿಗೆ ಬಸ್ ನಲ್ಲಿ ಪುರುಷರ ಓಡಾಟದಿಂದ ಬರ್ತಿರುವ ಆದಾಯವೂ ಡಬಲ್​ ಆಗಿದೆ.ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 42 ಲಕ್ಷ ಸಾರಿಗೆ ಬಸ್​​ನಲ್ಲಿ ಸಂಚರಿಸುತ್ತಿದ್ದರು.ಶಕ್ತಿ ಯೋಜನೆ ಜಾರಿ ಬಳಿಕ ನಿತ್ಯ ಸರಾಸರಿ 55 ಲಕ್ಷ ಪುರುಷರ ಒಡಾಟ ನಡೆಸುತ್ತಿದ್ದಾರೆ‌ಪುರುಷರ ದಿನ ನಿತ್ಯದ ಪ್ರಯಾಣದಲ್ಲಿ 13 ಲಕ್ಷ ಹೆಚ್ಚಳವಾಗಿದೆ.ಮಹಿಳೆಯರಿಗಿಂತ ಪರುಷರೇ ಹೆಚ್ಚಾಗಿ ಸಾರಿಗೆ ಬಸ್​ ಬಳಸ್ತಿದ್ದಾರೆ.ಕುಟುಂಬದವರ ಒಟ್ಟಾಗಿ ಪ್ರಯಾಣ ಮಾಡುವಾಗ ಮಹಿಳೆಯರಿಗೆ ಹೇಗೂ ಉಚಿತ ಅಂತ ಓಡಾಟ ನಡೆಸ್ತಿದ್ದಾರೆ.ರಶ್​ ಆದ್ರೂ ಕೂಡ ಫ್ರೀ ಬಸ್​ನಲ್ಲಿ ಪುರುಷರು ಓಡಾಡ್ತಿದ್ದಾರೆ.
 
ಪರುಷರ ಓಡಾಟದಿಂದ ಸಾರಿಗೆ ಸಂಸ್ಥೆಗೆ ನಿತ್ಯ 16.87 ಕೋಟಿ ಆದಾಯ ಬರ್ತಿದೆ.19 ದಿನದಲ್ಲಿ ಪುರುಷರ ಪ್ರಯಾಣದಿಂದ 302 ಕೋಟಿ ಆದಾಯ ಹರಿದು ಬಂದಿದೆ.ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 24.48 ಕೋಟಿ ಆದಾಯ ಬರ್ತಿತ್ತು.ಪುರುಷರ ಓಡಾಟದಿಂದ ಸಂಸ್ತಗೆ 12 ಕೋಟಿ ಆದಾಯ ಬರ್ತಿತ್ತು, ಈಗ 16.87 ಕೋಟಿ ಬರ್ತಿದೆ.ಮಹಿಳೆಯರ ಒಡಾಟದಿಂದ ಸರ್ಕಾರಕ್ಕೆ 11 ಸಾವಿರ ಕೋಟಿ ಖರ್ಚಗುತ್ತಿದೆ.ಸಾರಿಗೆ ಸಂಸ್ಥೆಗೆ ಒಂದು ದಿನಕ್ಕೆ 28.89 ಕೋಟಿ ಆದಾಯ ಬರ್ತಿದೆ.ಸಾರಿಗೆ ಸಂಸ್ಥೆಯ ಒಂದು ದಿನ ಖರ್ಚು ಮಾತ್ರ 34 ಕೋಟಿ ಇದೆ.ಇತರೆ ಮೂಲದ ಆದಾಯ ದಿನಕ್ಕೆ‌ ಒಂದು ಕೋಟಿಯಷ್ಟು ಬರ್ತಿದೆ.ಹಿಂದೆ ಹೋಲಿಕೆ ಮಾಡಿದ್ರೆ ಸಾರಿಗೆ ಸಂಸ್ಥೆ ನಷ್ಟದಲ್ಲಿ ಬರೀ ಇಳಿಕೆಯಾಗಿದೆ.ಮೊದಲು 10 ಕೋಟಿ ನಷ್ಟ ಆಗ್ತಿತ್ತು. ಈಗ ದಿನ 4 ಕೋಟಿ ಮಾತ್ರ ನಷ್ಟ ಆಗ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಆಸಿಡ್ ದಾಳಿಗೆ ಒಳಗಾಗಿದ್ದ ಸ್ನಾತಕೋತ್ತರ ಪದವೀಧರೆಗೆ ಉದ್ಯೋಗ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ