Publish Date: Tue, 28 Jun 2022 (08:57 IST)
Updated Date: Mon, 27 Jun 2022 (22:59 IST)
ಹುಬ್ಬಳ್ಳಿ : ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು. ಏಕೀಕರಣ ಹೋರಾಟದ ಉದ್ದೇಶ ಸಹಬಾಳ್ವೆ.
ಆ ಉದ್ದೇಶ ಮರೆತು ಮಾತನಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸಚಿವ ಉಮೇಶ್ ಕತ್ತಿಗೆ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ 2009ರಲ್ಲಿ ಹೀಗೆಯೇ ಹೇಳಿದ್ದರು. ನನ್ನ ಮಗ ಮುಖ್ಯಮಂತ್ರಿ ಆಗುತ್ತಾನೆ ಎಂದಿದ್ದರು. ನಾನು ಬಿಜೆಪಿ ಪಕ್ಷದವನಾಗಿ ಹೇಳುತ್ತಿದ್ದೇನೆ, ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ.