Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಲಿಕಾನ್ ಸಿಟಿ ಜನರ ಜೀವನಾಡಿ ಬಿಎಂಟಿಸಿ ಗೆ ಬಂತು ದುಸ್ಥಿತಿ..!

ಸಿಲಿಕಾನ್ ಸಿಟಿ ಜನರ ಜೀವನಾಡಿ ಬಿಎಂಟಿಸಿ ಗೆ ಬಂತು ದುಸ್ಥಿತಿ..!
bangalore , ಸೋಮವಾರ, 27 ಜೂನ್ 2022 (21:13 IST)
ಇಷ್ಟು ದಿನ ಲಾಸ್ ನಲ್ಲಿದ್ದ ಬಿಎಂಟಿಸಿ ಸಂಸ್ಥೆ ಈಗ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ. ಬಸ್ ಗಳಿಗೆ ಹಾಕ್ತಿರೋ ಡಿಸೇಲ್ ಗೂ ಪರಿತಪಿಸೋ ದುಸ್ಥಿತಿ ಬಂದಿದೆ.  ಬಿಎಂಟಿಸಿ ಬಸ್ ಗಳ‌ ಡಿಪೋಗಳಲ್ಲಿದ್ದ ಡಿಸೇಲ್ ಖಾಲಿಯಾಗ್ತಿದ್ದು, ಖಾಸಗೀ ಬಂಕ್  ಗಳ ಮುಂದೆ ಸಾಲುಗಟ್ಟಿ ಬಿಬಿಎಂಟಿಸಿ ಬಸ್ ಗಳು ಕ್ಯೂ ನಿಲ್ತಿವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿಗಮ‌ಪತ್ರ ಬರೆದಿದ್ದು, ಇನ್ನೈದಾರು ದಿನಕ್ಕೆ ಸಾಕಾಗುವಷ್ಟು ಇಂಧನ‌ ಮಾತ್ರ ಬಿಎಂಟಿಸಿ ನಿಗಮದ ಬಳಿ ಇದೆ. ಬೆಂಗಳೂರು ಜನರ ಜೀವನಾಡಿ ಅಂದ್ರೆ, ಅದು ಬಿಎಂಟಿಸಿ ಬಸ್ ಗಳು.‌ ಈಗಾಗಲೇ 746 ಕೋಟಿ ನಷ್ಟದಲ್ಲಿರುವ ಬಿಎಂಟಿಸಿ ಸಂಸ್ಥೆಗೆ ಈಗ ಡಿಸೇಲ್ ಅಭಾವ ಕೂಡ ಶುರುವಾಗಿದೆ. ಚಿಲ್ಲರೆ ಬೆಲೆಗೆ ಡಿಸೇಲ್ ಪೂರೈಕೆಗೆ ಹೆಚ್ ಪಿ ಸಿ ಎಲ್ ನಿರಾಕರಣೆ ಮಾಡಿರುವುದರಿಂದ ಬಂಕ್‌ಗಳಲ್ಲೇ ಬಿಎಂಟಿಸಿ ಬಸ್‌ಗಳಿಗೆ ಡೀಸೆಲ್ ಹಾಕಿಸುವ ದುಸ್ಥಿತಿ ಬಂದಿದೆ. ಹೀಗಾಗೀ ಬಿಎಂಟಿಸಿ ಬಸ್ ಗಳು ಡಿಸೇಲ್ ಹಾಕಿಸಿಕೊಳ್ಳಲು ನಗರದ ವಿವಿಧ ಬಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿವೆ. ಸಾಮಾನ್ಯ ವಾಹನಗಳಂತೆ ಬಿಎಂಟಿಸಿ ಬಸ್ ಗಳು ಡಿಸೇಲ್ ಹಾಕಿಸಿಕೊಳ್ಳುವುದರಿಂದ ಸಿಟಿಜನರಿಗೆ ಬಿಎಂಟಿಸಿ ಬಸ್ ಸಂಚಾರ ನಿಂತು ಬಿಡುತ್ತಾ ಅನ್ನೋ ಭಯ ಶುರುವಾಗಿದೆ. ಹೀಗಾಗಿ ಎಚ್ಚೇತ್ತ ಬಿಎಂಟಿಸಿ ಸಂಸ್ಥೆ ಸುದ್ದಿಗೋಷ್ಠಿ ನಡೆಸಿ ಇದಕ್ಕೆ ಕಾರಣ ಏನು ಅಂತಾ ತಿಳಿಸಿದ್ರು.
ಬಿಎಂಟಿಸಿ ಬಸ್ ಗಳೇ ಬಂಕ್ ಗಳಿಗೆ ಬಂದು ಡಿಸೇಲ್ ಹಾಕಿಸಿಕೊಳ್ತೀವೆ ಅಂದ್ರೆ, ಮುಂದಿನ ದಿನಗಳಲ್ಲಿ ರಾಜಧಾನಿಯಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರ ಇರತ್ತೋ ಇಲ್ವೋ ಅನ್ನೋ ಪ್ರಶ್ನೆ  ಸಾರ್ವಜನಿಕರಲ್ಲಿ ಮೂಡ್ತಿದೆ. ಹೀಗಾಗೀ 
ಬಿಎಂಟಿಸಿ ಸಂಸ್ಥೆಯ ನಿರ್ದೇಶಕಿ ಸತ್ಯವತಿ  5-6 ದಿನಕ್ಕೆ ಆಗುವಷ್ಟು ಡೀಸೆಲ್ ಇದೆ. ಇವತ್ತು ಕೆಲ ಬಸ್ ಗಳು ಬಂಕ್ ಗಳಿಗೆ ಹೋಗಿ ಡೀಸೆಲ್ ಹಾಕಿಸಿಕೊಂಡಿದ್ದಾರೆ. ನಿತ್ಯ 3.45 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತೆ ಹಾಗಾಗಿ ಬಸ್ ಗಳಿಗೆ ಬೇಕಾದಷ್ಟು ಡಿಸೇಲ್ ಹಾಕಿಸಿಕೊಳ್ಳಲಾಗ್ತಿದೆ. ಬಸ್ ಸಂಚಾರ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ ಅಂತಂದ್ರು.ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಹೆಚ್ ಪಿ ಸಿ ಎಲ್ ಗೆ 75 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದರಿಂದ ಈ ರೀತಿ ಸಮಸ್ಯೆಯಾಗ್ತಿದೆಯಂತೆ. ಈ ವಿಷಯವಾಗಿ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಪೆಟ್ರೊಲಿಯಂ ಮಿನಿಸ್ಟರ್ ಜೊತೆ  ಚರ್ಚೆ ಮಾಡಲಾಗಿದ್ದು, ನಿಗಮ ಪತ್ರವನ್ನ ಸಹ ಬರೆದಿದೆ. ಬಿಎಂಟಿಸಿ ಸಂಸ್ಥೆ ಏನೋ ಯಾವುದೇ ಕಾರಣಕ್ಕೂ ಬಸ್ ಸಂಚಾರ ನಿಲ್ಲುವುದಿಲ್ಲ ಅಂತಾ ಹೇಳಿದೆ. ಆದ್ರೆ, ಸ್ಟಾಕ್ ಇರೋ ಡೀಸೇಲ್ ಮುಗಿದ್ಮೇಲೆ ನಿಗಮ ಏನ್ ಮಾಡುತ್ತೆ ಅನ್ನೋದೇ ಈಗಿರುವ ಪ್ರಶ್ನೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ