ಉಡುಪಿಯ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ ಕೋಡ ಪಡುಕರೆ ಭಾಗದಲ್ಲಿ ಕಡಲು ಕೊರೆತ ತೀವ್ರಗೊಂಡಿದೆ. ಹೀಗಾಗಿ ಕಡಲೆಕಿನಾರೆಯಲ್ಲಿ ಸಾಗುವ ಹೆಜಮಾಡಿ ಕಾಪುವಿನಿಂದ ಮಲ್ಪೆವರೆಗಿನ ಏಕೈಕ ಸಂಪರ್ಕ ರಸ್ತೆ ಕಡಿದು ಹೋಗುವ ಭೀತಿಯಲ್ಲಿದೆ. ಕಡಲ್ಕೊರೆತ ಭಾದಿಸದಂತೆ ಇರಿಸಲಾದ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಅಲೆಗಳ ಅರ್ಭಟಕ್ಕೆ ತಡೆಯಲು ವಿಫಲವಾಗ್ತ ಇದೆ.
ಕಳೆದ 2 ದಿನಗಳಿಂದ ಈ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕಡಲ್ಕೊರೆತ ತಡೆಯಲು ಹಾಕಲಾದ ಬಂಡೆಕಲ್ಲು ಸಮುದ್ರ ಪಾಲಾಗುತ್ತಿದೆ. ಸಮುದ್ರದ ತೆರೆಗಳು ಕಡಲ ಕಿನಾರೆಯಲ್ಲಿರುವ ಕಾಂಕ್ರಿಟ್ ರಸ್ತೆಯನ್ನು ದಾಟಿ ಬರುತ್ತಿವೆ.
ಕಡಲ ತೀರದಲ್ಲಿರುವ ತೋಟ ಮನೆಗಳಿಗೆ ಸಮುದ್ರದ ನೀರು ನುಗ್ಗಿ ಪಕ್ಕದ ಹೊಳೆ ಸೇರುತ್ತಿದ್ದು ಅಪಾಯದ ಭೀತಿ ಸೃಷ್ಟಿ ಮಾಡಿದೆ. ಇನ್ನೂ ಕಾಂಕ್ರಿಟ್ ರಸ್ತೆಯ ಮೇಲೆ ಕಸದ ರಾಶಿ ಹಾಗೂ ಮರಳಿನ ರಾಶಿಗಳು ಬಿದ್ದಿದ್ದು ರಸ್ತೆ ಸಂಪೂರ್ಣವಾಗಿ ಕಡಲ ಕೊರೆತಕ್ಕೆ ಒಳಗಾಗಿ ಸಂಪರ್ಕ ಕಡಿದು ಹೋಗುವ ಭೀತಿ ಎದುರಾಗಿದೆ.