ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ಫುಟ್ ಬಾಲ್ ವಿಶ್ವಕಪ್ ಪಂದ್ಯಾವಳಿ ಮೇಲೆ ಉಗ್ರರ ಕರಿನೆರಳು ಬೀಳುವ ಸಾಧ್ಯತೆಯಿದೆ ಎಂದು ಅಮೆರಿಕಾದ ಭದ್ರತಾ ಸಂಸ್ಥೆ ಎಚ್ಚರಿಕೆ ನೀಡಿದೆ.
ವಿಶ್ವಕಪ್ ನಂತಹ ಹೆಚ್ಚು ಜನ ಸೇರುವ ಕ್ರೀಡಾ ಕೂಟಗಳು ಉಗ್ರರ ನೆಚ್ಚಿನ ಟಾರ್ಗೆಟ್ ಗಳಾಗುತ್ತವೆ. ಕ್ರೀಡಾಳುಗಳಿಗೆ ಉನ್ನತ ದರ್ಜೆಯ ಭದ್ರತೆ ಒದಗಿಸಿದ್ದರೂ, ಪಂದ್ಯಗಳು ನಡೆಯುವ ಮೈದಾನಗಳು ಉಗ್ರರ ಟಾರ್ಗೆಟ್ ಆಗುವ ಸಂಭವವಿದೆ ಎಂದು ಭದ್ರತಾ ಸಂಸ್ಥೆ ಎಚ್ಚರಿಸಿದೆ.
ಈ ಹಿಂದೆಯೂ ಅಮೆರಿಕಾದ ಸರ್ಕಾರಿ ಭದ್ರತಾ ಸಂಸ್ಥೆ ರಷ್ಯಾದಲ್ಲಿ ಫುಟ್ಬಾಲ್ ಪಂದ್ಯ ಆಯೋಜಿಸುವುದಕ್ಕೆ ಭದ್ರತಾ ದೃಷ್ಟಿಯಿಂದ ತಕರಾರು ತೆಗೆದಿತ್ತು. ಇದೀಗ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.