ಬೆಂಗಳೂರು: ಈ ಬಾರಿ ಕೊರೋನಾದಿಂದಾಗಿ ಶೈಕ್ಷಣಿಕ ವರ್ಷ ಆರಂಭವಾಗುವುದು ಯಾವಾಗ ಎನ್ನುವುದೇ ಗೊತ್ತಿಲ್ಲ. ಹೀಗಾಗಿ ಕೆಲವು ಶಾಲೆಗಳು 1 ರಿಂದ 10 ರವರೆಗಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಶುರು ಮಾಡುತ್ತಿವೆ.
ಪಾಠವೇನೋ ಆನ್ ಲೈನ್ ನಲ್ಲೇ ನಡೆಯುತ್ತದೆ. ಮೊದಲಾರ್ಧದ ಪರೀಕ್ಷೆ ಗತಿಯೇನು? ಶಾಲೆ ಶುರುವಾಗುವುದೇ ಆಗಸ್ಟ್-ಸೆಪ್ಟೆಂಬರ್ ಎಂದಾದರೆ ಪ್ರಾಥಮಿಕ ಪರೀಕ್ಷೆ ಶಾಲೆಯಲ್ಲಿ ನಡೆಸುವುದು ಕಷ್ಟವಾಗಲಿದೆ.
ಹೀಗಾಗಿ ಕೆಲವು ಶಾಲೆಗಳು ಆನ್ ಲೈನ್ ಪಾಠದ ಜತೆಗೇ ಆನ್ ಲೈನ್ ನಲ್ಲೇ ಪರೀಕ್ಷೆಗೂ ಸಿದ್ಧತೆ ನಡೆಸಿದೆ. ಆನ್ ಲೈನ್ ನಲ್ಲಿ ನಡೆಸುವ ಪರೀಕ್ಷೆಯನ್ನೇ ಫಸ್ಟ್ ಟರ್ಮ್ ಪರೀಕ್ಷೆ ಎಂದು ಪರಿಗಣಿಸಲು ಕೆಲವು ಶಾಲೆಗಳು ಈಗಾಗಲೇ ಪೋಷಕರಿಗೂ ಸೂಚನೆ ನೀಡಿದೆ. ಇದಕ್ಕೆಲ್ಲಾ ಮಕ್ಕಳನ್ನು ಸಿದ್ಧರಾಗಿಸುವ ಹೊಣೆ ಈಗ ಪೋಷಕರ ಮೇಲಿದೆ.