Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಶಾಲೆ ಬಂದ್ಗೆ ಚರ್ಚೆ ವೇಳೆ ಸಿಎಂ ಬೊಮ್ಮಾಯಿಗೆ ಹಿರಿಯ ಸಚಿವರು ಮನವಿ ಮಾಡಿದ್ದಾರೆ.
ಪಾದಯಾತ್ರೆಯ ವೇಳೆ ಡಿ.ಕೆ. ಶಿವಕುಮಾರ್ಗೆ ಸನ್ಮಾನ ಹಾಗೂ ಜೈಕಾರ, ಶಾಲಾ ಮಕ್ಕಳ ಜತೆ ಡಿಕೆಶಿ ಫೋಟೋ ತೆಗೆಸಿಕೊಂಡ ಹಿನ್ನೆಲೆ ಪಾದಯಾತ್ರೆ ಮುಗಿಯುವವರೆಗೂ ಶಾಲೆ ಬಂದ್ಗೆ ಮನವಿ ಮಾಡಲಾಗಿದೆ.
ದೂರವಾಣಿ ಮೂಲಕ ಚರ್ಚೆ ವೇಳೆ ಸಿಎಂಗೆ ಸಚಿವರು ಮನವಿ ಮಾಡಿದ್ದಾರೆ.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಾಳೆ (ಜನವರಿ 13) ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗುವ ಹಿನ್ನೆಲೆ ಪಾದಯಾತ್ರೆ ವೇಳೆ ಸಂಚಾರ ಸ್ಥಗಿತಗೊಳಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ.
ವಾಹನ ಸಂಚಾರ ಸ್ಥಗಿತಗೊಳಿಸದಿರಲು ಸರ್ಕಾರ ನಿರ್ಧಾರ ಮಾಡಿದೆ. ಎಂದಿನಂತೆ ಸಂಚಾರ ಇರುವಂತೆ ನೋಡಿಕೊಳ್ಳಲು ಸೂಚನೆ ಕೊಡಲಾಗಿದೆ. ರಾಮನಗರ ಪೊಲೀಸ್ ಇಲಾಖೆಗೆ ಸರ್ಕಾರದಿಂದ ಸೂಚನೆ ಕೊಡಲಾಗಿದೆ.