Publish Date: Mon, 24 Oct 2022 (20:58 IST)
Updated Date: Mon, 24 Oct 2022 (21:00 IST)
ಎಸ್ಸಿ ಎಸ್ಟಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೂಸು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ಸಮೂದಾಯಗಳಿಗೆ ಮೀಸಲಾತಿ ಹೆಚ್ಚಳ ಕುರಿತು ಮಾತನಾಡಿ ಎಸ್ಸಿ ಎಸ್ಟಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೂಸು ನಾಗ ಮೋಹನ್ ದಾಸ್ ಕಮಿಟಿ ಮಾಡಿದ್ದಕ್ಕೆ ಯಶಸ್ಸು ಕಂಡಿದೆ.ಕಾಂಗ್ರೆಸ್ ಪಕ್ಷದ ಬಯಕೆ ಜನಾಂಗಕ್ಕೆ ನ್ಯಾಯ ಒದಗಿಸಬೇಕು ಅನ್ನೋದು.ಎಸ್.ಟಿ ಜನಾಂಗದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ ಅಧಿಕಾರ ಬಂದ ೨೪ ಗಂಟೆಯಲ್ಲೇ ಬಿಜೆಪಿ ಇದನ್ನು ಮಾಡಬೇಕಿತ್ತು.ಈಗಲೂ ಡಬಲ್ ಇಂಜಿನ್ ಸರ್ಕಾರ, ಬರೀ ಪೇಪರ್ ನಲ್ಲಿ ಇಟ್ಟು ಚಾಕ್ಲೆಟ್ ಕೊಡಕ್ಕೆ ಹೋಗಬೇಡಿ ಬಿಜೆಪಿ ತೀರ್ಮಾನ ಕೇವಲ ಕಣ್ಣು ಒರೆಸುವುದಷ್ಟೇ ಬೇರೆನೂ ಇಲ್ಲ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.