Publish Date: Thu, 13 Oct 2022 (16:09 IST)
Updated Date: Thu, 13 Oct 2022 (16:12 IST)
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕರ್ನಾಟಕ BJP ಟ್ವೀಟ್ ಮಾಡಿ ಲೇವಡಿ ಮಾಡಿದೆ. ಮಾನ್ಯ ಸಿದ್ದರಾಮಯ್ಯರೇ ಜೋಡೊ ಎಂದರೆ ಕನ್ನಡದಲ್ಲಿ ಕೂಡುವುದು ಎಂದರ್ಥ. ನಿಮಗೆ ಒಂದಾಗಿರುವುದೇ ಗೊತ್ತಿಲ್ಲದ ಮೇಲೆ ಜೋಡೊ ಎಂದು ಏಕೆ ಆ ಹುಡುಗನನ್ನು ಕರೆದುಕೊಂಡು ಓಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದೆ. ಬುರುಡೆರಾಮಯ್ಯ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿರುವ ಬಿಜೆಪಿ, ನಮ್ಮ ಮುಖ್ಯಮಂತ್ರಿಗಳ ಧೈರ್ಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರೇ, ನಿಮಗೆ ತಾಕತ್ತಿದ್ದರೆ KPCC ಅಧ್ಯಕ್ಷ DK ಶಿವಕುಮಾರ್ ಅವರ ಜೊತೆ ಯಾತ್ರೆ ಮಾಡಿ. ನಿಮಗೆ ಧಮ್ ಇದ್ದರೆ KPCC ಅಧ್ಯಕ್ಷರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂಬುದಾಗಿ ಹೇಳಿ ಎಂದು ಲೇವಡಿ ಮಾಡಿದೆ. ಸಿಎಂ ಆಗುವ ಆಸೆಯಿಂದ ಆ ಸಣ್ಣ ಹುಡುಗನ ಮಾತು ಕೇಳಿಕೊಂಡು ಸಿದ್ದರಾಮಯ್ಯ ರಸ್ತೆಯಲ್ಲಿ ಓಡುವುದು, ಬಸ್ಕಿ ಹೊಡೆಯುವುದು ನೋಡಿದಾಗಲೆಲ್ಲ ಅಯ್ಯೋ ಪಾಪ ಅನಿಸುತ್ತದೆ. ಬಿಜೆಪಿಯಲ್ಲಿ ಎಲ್ಲರೂ ಒಂದಾಗಿ ಯಾತ್ರೆ ಮಾಡುತ್ತಿರುವುದನ್ನು ನೋಡಿ ಬೀದಿ ಜಗಳವಾಡುವ ಕಾಂಗ್ರೆಸ್ ಪಕ್ಷಕ್ಕೆ ನಡುಕವುಂಟಾಗಿದೆಯೇ ಎಂದು ಪ್ರಶ್ನಿಸಿ ಅಪಹಾಸ್ಯ ಮಾಡಿದೆ.