Publish Date: Fri, 17 Jul 2020 (14:13 IST)
Updated Date: Fri, 17 Jul 2020 (14:15 IST)
ಮಗನ ಜೀವ ಉಳಿಸಿದ ಖ್ಯಾತ ಚಿತ್ರನಟಿಯೊಬ್ಬಳು ನೀರುಪಾಲಾಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ನಾಲ್ಕು ವರ್ಷದ ಮಗನೊಂದಿಗೆ ಕ್ಯಾಲಿಫೋರ್ನಿಯಾದ ಕಣಿವೆಯೊಂದರಲ್ಲಿ ಬೋಟಿಂಗ್ ಗೆ ಹೋಗಿದ್ದ ಹಾಲಿವುಡ್ ನಟಿ ನಯಾ ರಿವೇರಾ ಶವ ಪತ್ತೆಯಾಗಿದೆ.
ಬೋಟ್ ನಲ್ಲಿ ಮಗನೊಂದಿಗೆ ತೆರಳಿದ್ದಾಗ ಬೋಟ್ ಮುಳುಗಿದೆ. ಹೀಗಾಗಿ ಮಗನನ್ನು ರಕ್ಷಣೆ ಮಾಡಿ ಬೋಟ್ ನಲ್ಲಿ ಕೂಡಿಸಿದ್ದಾರೆ.
ಆದರೆ ಆ ಬೋಟ್ ಏರಲು ಆಗದೇ ನೀರಲ್ಲಿ ಮುಳುಗಿ ನಟಿ ನಯಾ ನೀರುಪಾಲಾಗಿದ್ದಾರೆ ಎನ್ನಲಾಗಿದೆ.
ಕಣಿವೆಯಲ್ಲಿ ನಟಿಯ ಶವ ಪತ್ತೆಯಾಗಿದೆ.