Publish Date: Sun, 14 Jun 2020 (17:24 IST)
Updated Date: Sun, 14 Jun 2020 (17:26 IST)
ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಹಾಗೂ ಅವಳ ಹೆಣ್ಣು ಮಕ್ಕಳಿಬ್ಬರು ದಾರುಣವಾಗಿ ಜೀವ ಬಿಟ್ಟಿದ್ದಾರೆ.
ನಾಗಮಂಗಲದ ಬೀರನಹಳ್ಳಿಯಲ್ಲಿ ಘಟನೆ ನಡೆದಿದ್ದು, ಬಟ್ಟೆ ಒಗೆಯಲು ಹೋಗಿದ್ದ ತಾಯಿ ಗೀತಾ (38), ಮಕ್ಕಳಾದ ಸವಿತಾ (18), ಸೌಮ್ಯ (15) ಸಾವನ್ನಪ್ಪಿದ್ದಾರೆ.
ಕೆರೆಯಲ್ಲಿ ಬಟ್ಟೆ ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಹಿರಿಯ ಮಗಳು ನೀರಿಗೆ ಬಿದ್ದಿದ್ದಾಳೆ. ಅವಳನ್ನು ರಕ್ಷಿಸಲು ಮುಂದಾದ ತಾಯಿ ಗೀತಾ ಹಾಗೂ ಮಗಳು ಸೌಮ್ಯ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.