Publish Date: Tue, 21 Nov 2023 (14:00 IST)
Updated Date: Tue, 21 Nov 2023 (14:56 IST)
ಟಿಕೆಟ್ ಗಾಗಿ ಹೆಚ್ ಡಿ ಕೆ ಹಣ ಪಡೆದಿದ್ರು ಎಂಬ ಆರೋಪ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಕ್ಕೆ ಶರವಣ ಪ್ರತಿಕ್ರಿಯಿಸಿದ್ದಾರೆ.ಇಬ್ರಾಹಿಂ ಆರೋಪಕ್ಕೆ ಶರವಣ ಅಸಮಾಧಾನಗೊಂಡಿದ್ದಾರೆ.ಪಕ್ಷ ಸಂಘಟನೆಗೆ ಹೆಚ್ಡಿಕೆ ನನ್ನಿಂದ ಸಹಾಯ ಪಡೆದಿದ್ದಾರೆ.
ವೈಯುಕ್ತಿಕವಾಗಿ ಅವರು ಸಹಾಯ ಪಡೆದಿಲ್ಲ.ಸಿ.ಎಂ.ಇಬ್ರಾಹಿಂ ಕೂಡ ಸಹಾಯ ಪಡೆದಿದ್ದಾರೆ.ಪುತ್ರನ ಚುನಾವಣಾ ಪ್ರಚಾರಕ್ಕೆ ಪಡೆದಿದ್ದರು.ಹುಮನಾಬಾದ್ ಚುನಾವಣೆಗೆ ನಿಲ್ಲಿಸಲು ಹಣ ಪಡೆದಿದ್ರು.ನಾನು ಅವರಿಗೆ ಹಣ ಕೊಟ್ಟಿದ್ದೆ.ಎಲ್ಲಾದ್ರೂನಾನು ಕೊಟ್ಟಿದ್ದೆ ಅಂತ ಹೇಳಿದ್ನಾ? ಎಂದು ಸಿ.ಎಂ.ಇಬ್ರಾಹಿಂ ವಿರುದ್ಧ ಎಂಎಲ್ ಸಿ ಶರವಣ ಆಕ್ರೋಶ ಹೊರಹಾಕಿದ್ದಾರೆ.