ದೇವೇಗೌಡರಿಗೆ ಸೆಡ್ಡು ಹೊಡೆಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.ಗೌಡರನ್ನ ಹೊರಗಿಟ್ಟು ಕಾರ್ಯಕಾರಿಣಿ ಸಭೆ ನಡೆಸಲಾಗಿದೆ.ನಿನ್ನೆ ರಾಷ್ಟ್ರೀಯ ನಾಯಕರು ಸಭೆ ನಡೆಸಿದ್ದಾರೆ.ಕೇರಳದ ತಿರುವನಂತಪುರದ ಆಕ್ಸನ್ ಗ್ರಾಫ್ಟ್ ವಿಲೇಜ್ ನಲ್ಲಿ ಸಭೆ ನಡೆಲಾಗಿತ್ತು.ಕೇರಳದ ಅಧ್ಯಕ್ಷ ಮ್ಯಾಥ್ಯೂಸ್,ಕರ್ನಾಟಕದ ಸಿ.ಎಂ ಇಬ್ರಾಹಿಂ,ಆಂಧ್ರ,ತೆಲಂಗಾಣ,ಉತ್ತರಖಂಡ,ಹರ್ಯಾಣ,ಪಂಜಾಬ್ ನ ಜೆಡಿಎಸ್ ನಾಯಕರು ಭಾಗಿಯಾಗಿದ್ದರು.
ಕಾರ್ಯಕಾರಿಣಿಯಲ್ಲಿ ನಿರ್ಣಯ ಅಂಗೀಕಾರಕ್ಕೆ ಜೆಡಿಎಸ್ ವರಿಷ್ಠರಿಗೆ ನೊಟೀಸ್ ನೀಡಲು ತೀರ್ಮಾನ ಮಾಡಲಾಗಿದ್ದು,ಬಿಜೆಪಿ ಜೊತೆ ಮೈತ್ರಿ ನಿಯಮಗಳ ವಿರುದ್ಧವಾಗಿದೆ.ಸೆಕ್ಯೂಲರಿಸಂ ವಿರುದ್ಧವಾಗಿ ಮೈತ್ರಿಯಾಗಿದೆ.ಜೆಡಿಎಸ್ ಬೈಲಾದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.ಸೆಕ್ಯೂಲರ್ ಹೊರತಾದ ಪಕ್ಷಗಳ ಜೊತೆ ಮೈತ್ರಿ ಇಲ್ಲ.ಆದರೆ ಕೋಮುವಾದಿ ಜೊತೆ ಮೈತ್ರಿ ಮಾಡಿಕೊಂಡಿದ್ದೀರ.ಬೈಲಾ ಪ್ರಕಾರ ಇಂತಹ ಮೈತ್ರಿ ಅಪವಿತ್ರವಾದದ್ದು,ಹಾಗಾಗಿ ಮೈತ್ರಿಯ ಬಗ್ಗೆ ನಿಮ್ಮ ಸ್ಪಷ್ಟ ತೀರ್ಮಾನ ತಿಳಿಸಿ.ಮೈತ್ರಿ ಮುಂದುವರಿಸಿದರೆ ಪಕ್ಷದ ಸಿದ್ಧಾಂತಕ್ಕೆ ವಿರುದ್ಧ,ಪಕ್ಷದ ಮೇಲಿನ ನಿಮ್ಮಹಿಡಿತ ತಪ್ಪಲಿದೆ.ಡಿಸೆಂಬರ್ ೯ ರೊಳಗೆ ತಮ್ಮ ತೀರ್ಮಾನ ತಿಳಿಸಬೇಕು ಎಂದು ಈ ಬಗ್ಗೆ ಎಕ್ಸಿಕ್ಯೂಟೀವ್ ಕಮಿಟಿ ನಿರ್ಣಯ ಕೈಗೊಂಡಿದೆ.
ಬೆಂಗಳೂರಿನಲ್ಲಿ ಕೌನ್ಸಿಲ್ ಸಭೆ ನಡೆಸಲು ನಿರ್ಧಾರಿಸಿದ್ದು,ಆ ಸಭೆಯಲ್ಲಿ ತಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಬಿಂಬಿತವಾಗಿದೆ.ಒರಿಜಿನಲ್ ಜೆಡಿಎಸ್ ಎಂದು ಸಾರಲು ಜೆಡಿಎಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.