ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರೋ ವಿವಾದಿತ ಹೇಳಿಕೆಯನ್ನು ಖಂಡಿಸಿ ಶಿರಡಿ ನಿವಾಸಿಗಳು ಅನಿರ್ದಿಷ್ಟಾವಧಿ ಬಂದ್ ಗೆ ಕರೆ ನೀಡಿದ್ದಾರೆ.
ಮಹಾರಾಷ್ಟ್ರದ ಬರ್ ಬನಿ ಜಿಲ್ಲೆಯ ಪಥ್ರಿ ಪಟ್ಟಣವನ್ನು ಸಾಯಿಬಾಬಾ ಅವರ ಜನ್ಮಸ್ಥಳವನ್ನಾಗಿ ಅಭಿವೃದ್ಧಿ ಮಾಡೋದಾಗಿ ಹೇಳಿರೋ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಶಿರಡಿ ಬಂದ್ ನಿಂದಾಗಿ ದೇವಾಲಯದ ನಿತ್ಯದ ಕೆಲಸಗಳಿಗೆ ತೊಂದರೆಯಾಗೋದಿಲ್ಲ. ಆದರೆ ಸರಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಬಂದ್ ಕರೆ ನೀಡಲಾಗಿದೆ. ಶಿರಡಿ ಹಾಗೂ ಪಥ್ರಿ ನಗರ ನಿವಾಸಿಗಳೂ ಬಂದ್ ಗೆ ಸಾಥ್ ನೀಡಿದ್ದಾರೆ.