85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿಯಿಂದ ಬಸ್ ಗಳಿಗೆ ಪೋಸ್ಟರ್ ಅಳವಡಿಸಲಾಗುತ್ತಿದೆ.
ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣದಿಂದ ಜಿಲ್ಲೆಯ ಗ್ರಾಮಾಂತರ ಪ್ರದೇಶಕ್ಕೆ ನಿತ್ಯ ಸಂಚರಿಸುವ ಸರ್ಕಾರಿ ಬಸ್‍ಗಳಿಗೆ ಫೆಬ್ರವರಿ 5, 6 ಮತ್ತು 7 ರಂದು ಕಲಬುರಗಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳಕ್ಕೆ ಸ್ವಾಗತ ಕೋರುವ ಪೋಸ್ಟರ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ದೂರದ ಜಿಲ್ಲೆ, ರಾಜಧಾನಿ ಹಾಗೂ ಅಂತರಾಜ್ಯಗಳಿಗೆ ಹೊರಡುವ ಬಸ್‍ಗಳಿಗೂ ಪೋಸ್ಟರ್ ಅಂಟಿಸುವ ಕಾರ್ಯ ಕೈಗೊಳ್ಳಲಾಗಿದೆ. ಇದಲ್ಲದೇ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಸೂಚನಾ ಫಲಕದಲ್ಲಿ ಪೋಸ್ಟರ್ ಪ್ರದರ್ಶನಕ್ಕೂ ಕ್ರಮ ವಹಿಸಲಾಗಿದೆ.
ಈಗಾಗಲೆ ಜಿಲ್ಲೆಯ ಸುಮಾರು 2000 ಸರ್ಕಾರಿ ವಾಹನಗಳು, ಖಾಸಗಿ ಕಾರ್, ಆಟೋಗಳಿಗೆ ಮತ್ತು ಅಷ್ಟೇ ಸಂಖ್ಯೆಯ ದ್ವಿಚಕ್ರ ವಾಹನಗಳಿಗೆ ಸಾಹಿತ್ಯ ಸಮ್ಮೇಳನದ ಕುರಿತು ಸ್ಟಿಕ್ಕರ್ ಅಳವಡಿಸಲಾಗಿದೆ.
ಒಟ್ಟಾರೆ ವಿನೂತನ ಪ್ರಚಾರ ಶೈಲಿಗಳನ್ನು ಅಳವಡಿಸಿಕೊಂಡು ಅಕ್ಚರ ಜಾತ್ರೆಗೆ ಲಕ್ಷಾಂತರ ಜನ ಆಗಮಿಸುವ ನಿಟ್ಟನಲ್ಲಿ ವ್ಯಾಪಕ ಪ್ರಚಾರ ಕಾರ್ಯಕ್ರಮಗಳು ಪ್ರಚಾರ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ.