ಈಗಷ್ಟೇ ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರೋ ಜಗತ್ತಿಗೆ ರಷ್ಯಾ - ಉಕ್ರೇನ್ ಸಂಘರ್ಷ ಮತ್ತೊಂದು ಆಘಾತ ನೀಡಿದೆ. ಭಾರತದ ಪಾಲಿಗೂ ಯುದ್ಧದ ಬಿಸಿ ತಟ್ಟಲಾರಂಭಿಸಿದ್ದು, ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 51 ಪೈಸೆ ಇಳಿಕೆ ಕಂಡಿದ್ದು, ಪ್ರಸ್ತುತ 77.41ರೂ. ಇದೆ..ಇನ್ನು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ ಡಾಲರ್ ಮೌಲ್ಯ ಕೂಡ ಹೆಚ್ಚಿತು. ಪರಿಣಾಮ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯದಲ್ಲಿ ತೀವ್ರ ಕುಸಿತ ಕಂಡುಬಂದಿತು. ಇಂದಿನ ಆರಂಭಿಕ ವಹಿವಾಟಿನಲ್ಲೇ ರೂಪಾಯಿ ಮೌಲ್ಯ ಸಾರ್ವಕಾಲಿಕ ಕಡಿಮೆ ಮಟ್ಟಕ್ಕೆ ಕುಸಿತ ಕಂಡಿದೆ. ಇದು ಭಾರತದ ಆರ್ಥಿಕ ರಂಗಕ್ಕೆ ದೊಡ್ಡ ಆಘಾತ ನೀಡಿದೆ.