ಆರ್ ಎಸ್ ಎಸ್ ಮತ್ತು ಬಿಜೆಪಿ ಅವರು ಮಹಾತ್ಮ ಗಾಂಧಿ ವಿರೋಧಿಗಳಾಗಿದ್ದಾರೆ. ಇದನ್ನ ಬಹಿರಂಗವಾಗಿ ಅವರು ಹೇಳುತ್ತಿರಲಿಲ್ಲ. ಆರ್ ಎಸ್ ಎಸ್ ಕಚೇರಿಗಳಲ್ಲಿ ಚರ್ಚೆ ಮಾಡುವಾಗ ಗೋಡ್ಸೆ ದೇಶಭಕ್ತ ಎಂದು ಹೇಳುತ್ತಿದ್ರು. ಹೀಗಂತ ಕಾಂಗ್ರೆಸ್ ದೂರಿದೆ.
ಮಹಾತ್ಮ ಗಾಂಧಿ ದೇಶ ಹಾಳು ಮಾಡಿದ್ರು ಅಂತ ಹೇಳುತ್ತಿದ್ರು. ಆದರೆ ಹೊರಗೆ ಹೇಳುತ್ತಿರಲಿಲ್ಲ. ಟೆರರಿಸ್ಟ್ ಅಟ್ಯಾಕ್ ನಲ್ಲಿ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ದೇಶ ಒಡೆಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ. ದೇಶದಲ್ಲಿ ರಕ್ತಪಾತವಾಗಬೇಕೆಂದು ಹೀಗೆಲ್ಲಾ ಮಾಡ್ತಾ ಇದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಟೀಕೆ ಮಾಡಿದ್ದಾರೆ.
ದೇವರನ್ನು ಕೂಡ ಬಿಜೆಪಿ ಅವರು ಬಿಡಲಿಲ್ಲ. ರಾಮನ ಹೆಸರನ್ನು ಹೇಳಿಕೊಂಡು ವೋಟ್ ತೆಗೆದುಕೊಂಡ್ರು. ರಾಮನ ಹೆಸರಿನಲ್ಲಿ ವೋಟ್ ತೆಗೆದಕೊಂಡು ದೇಶದ ಜನರಿಗೆ ಮೋಸ ಮಾಡಿದ್ದಾರೆ. ಬಿಜೆಪಿ ಅವರು ಡೋಂಗಿಗಳು ಎಂದರು.
ಮೋದಿ ಅವರು ಪ್ರಜ್ಞಾ ಸಿಂಗ್ ರನ್ನು ಕ್ಷಮಿಸೊದಿಲ್ಲ ಎಂದು ಹೇಳಿದ್ದಾರೆ. ಸರಿ, ಏನು ಕ್ರಮ ತೆಗೆದಕೊಳ್ತೀರಾ ಅದನ್ನ ಹೇಳಿ ಎಂದರು. ಪ್ರಜ್ಞಾ ಮೇಲೆ ಕ್ರಮ ತೆಗೆದುಕೊಳ್ಳದೇ ಹೋದರೆ, ನೀವೊಬ್ಬ ಡೋಂಗಿ ಪ್ರಧಾನ ಮಂತ್ರಿ ಎಂದು ಸಾಬೀತಾಗುತ್ತೆ ಅಂತ ದಿನೇಶ್ ಗುಂಡೂರಾವ್ ಹೇಳಿದ್ದಾರೆ.