Publish Date: Sat, 18 May 2019 (14:45 IST)
Updated Date: Sat, 18 May 2019 (14:47 IST)
ನಳೀನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ ನಿಜವಾದ ಭಯೋತ್ಪಾದಕರು. ನಾವು ನಿಜವಾದ ದೇಶಭಕ್ತರು
ಅಂತ ಕೈ ಪಡೆ ಮುಖಂಡ ಹೇಳಿದ್ದಾರೆ.
ನಳೀನ್ ಕುಮಾರ್ ಕಟೀಲ್ ಒಬ್ಬ ನೀಚ ಅಂತ ಬೇಳೂರು ಗೋಪಾಲಕೃಷ್ಣ ಟೀಕೆ ಮಾಡಿದ್ದಾರೆ. ನನ್ನ ಮೇಲೆ ಈ ಹಿಂದೆ ಇದೇ ಬಿಜೆಪಿಯವರು ಕಂಪ್ಲೆಂಟ್ ಕೊಟ್ಟಿದ್ರು. ಈಗ ಬಿಜೆಪಿಯವರು ಏನ್ ಹೇಳ್ತಾರೆ..? ಅಂತ ಪ್ರಶ್ನೆ ಮಾಡಿದ್ರು.
ಮೌರ್ಯ ಸರ್ಕಲ್ ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದು, ದೇಶದ ಪಿತಾಮಹ ಮಹಾತ್ಮ ಗಾಂಧಿಯನ್ನ ಬಿಜೆಪಿ ನಾಯಕರು ಅವಮಾನ ಮಾಡ್ತಾಯಿದ್ದಾರೆ. ದೇಶ ದ್ರೋಹಿ ಗೋಡ್ಸೆಯನ್ನ ದೇಶಭಕ್ತ ಎಂದು ಸಮರ್ಥನೆ ಮಾಡಿಕೊಳ್ತಾಯಿದ್ದಾರೆ. ನಳೀನ್ ಕುನಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ ನಿಜವಾದ ಭಯೋತ್ಪಾದಕರು ಎಂದು ದೂರಿದ್ರು.
ನಾನು ಅವತ್ತು ಮೋದಿ ಅವರಿಗೆ ಗುಂಡಿಟ್ಟು ಕೊಲ್ಲಿ ಅಂತ ಹೇಳಿಲ್ಲ. ಗಾಂಧಿ ಫೊಟೋಗೆ ಪೂಜಾ ಪಾಂಡೆ ಅನ್ನುವವರು ಗನ್ ಇಟ್ಟಿದ್ರು. ಅದಕ್ಕೆ ನಾನು ನಿಮ್ಮ ನಾಯಕರಿಗೆ ಹೀಗೆ ಗುಂಡಿಡುತ್ತೀರಾ ಅಂತ ಕೇಳಿದ್ದೆ. ಅದನ್ನೆ ದೇಶದ್ರೋಹ ಎಂದು ಪ್ರತಿಭಟನೆ ಮಾಡಿದ್ರು. ಈಗ ಬಿಜೆಪಿ ನಾಯಕರು ಏನು ಹೇಳ್ತಾರೆ..? ಎಂದು ಖಾರವಾಗಿ ಪ್ರಶ್ನಿಸಿದ್ರು.