Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ವೈದ್ಯಕೀಯ ಸಿಬ್ಬಂದಿ ಸೋಗಿನಲ್ಲಿ ಬಂದಿದ್ದ ಮೂವರು ಪಿಸ್ತೂಲ್ ತೋರಿಸಿ ಸಿನಿಮೀಯ ರೀತಿ ದರೋಡೆ ಮಾಡಿರುವ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯ ಎಸ್ಬಿಎಂ ಕಾಲೊನಿಯಲ್ಲಿ ನಡೆದಿದೆ.
ಲಸಿಕೆ ಹಾಕುವುದಾಗಿ ಸಂಪತ್ ಸಿಂಗ್ ಎಂಬುವವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ 50 ಗ್ರಾಂ ಚಿನ್ನಾಭರಣ ದೋಚಿ, ಪರಾರಿಯಾಗಿದ್ದಾರೆ. ಘಟನೆ ನಡೆದಾಗ ಮನೆಯಲ್ಲಿ ಸಂಪತ್ ಸಿಂಗ್ ಅವರು ಮನೆಯಲ್ಲಿ ಇರಲಿಲ್ಲ.
ಅವರ ತಾಯಿ ಹಾಗೂ ಪತ್ನಿ ಇಬ್ಬರೇ ಮನೆಯಲ್ಲಿದ್ದರು. ಕಾರು ಹಾಗೂ ಬೈಕಿನಲ್ಲಿ ದುಷ್ಕರ್ಮಿಗಳು ಮನೆಗೆ ಬಂದಿದ್ದರು. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.