Publish Date: Fri, 09 Jun 2023 (19:34 IST)
Updated Date: Fri, 09 Jun 2023 (18:37 IST)
ಮಲ್ಲಸಂದ್ರ ಅಂಗನವಾಡಿಯಲ್ಲಿ ಅವಧಿ ಮುಗಿದ ಆಹಾರ ಪೂರೈಕೆ ವಿಚಾರ ನನ್ನ ಗಮನಕ್ಕೆ ಬಂದಿದೆ. ವಿಡಿಯೋ ಕೂಡ ಪರಿಶೀಲನೆ ನಡೆಸಿದ್ದೀವಿ. ಸಂಬಂಧಪಟ್ಟ ಉಪ ನಿರ್ದೇಶಕರಿಂದ ವರದಿ ತರಿಸ್ಕೊಳ್ತೀವಿ. ವರದಿ ಪರಿಶೀಲಿಸಿ ಕನ್ಸಲ್ಟ್ ಮೇಲೆ ಕ್ರಮ ಕೈಗೊಳ್ತೀವಿ ಎಂದರು.ಇನ್ನು ಕಳಪೆ ಮೊಟ್ಟೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಯಾರಾದರೂ ಟೆಂಡರ್ದಾರರು ಕಳಪೆ ಮೊಟ್ಟೆ ಪೂರೈಕೆ ಮಾಡ್ತಿದ್ರೆ, ಅದನ್ನು ಇಲಾಖೆ ಗಮನಕ್ಕೆ ತರಬಹುದು. ಅಂತಹ ಟೆಂಡರ್ದಾರರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಿ ಮುಂದಿನ ಕ್ರಮ ಕೈಗೊಳ್ತೀವಿ ಎಂದು ಹೇಳಿದ್ರು.