ನಕಲಿ ದಾಖಲೆ ನೀಡಿ ಪಡಿತರ ಚೀಟಿ ಪಡೆದಿದ್ದವರನ್ನು ಸರ್ವೆ ನಡೆಸಿದ ಇಲಾಖೆಗೆ 12 ಲಕ್ಷದ 50 ಸಾವಿರ ನಕಲಿ ಕಾರ್ಡುಗಳನ್ನು ಪತ್ತೆಹಚ್ಚಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ನಕಲಿ ರೇಷನ್ ಕಾರ್ಡ್ ಪತ್ತೆ ಹಚ್ಚಿದ್ದರಿಂದ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಉಳಿತಾಯವಾಗಿದೆ. ಆದಾಯ ತೆರಿಗೆ ಪಾವತಿಸುತ್ತಿರುವವರು, ಸರ್ಕಾರಿ ನೌಕರರು ನಿಯಮಗಳನ್ನು ಉಲ್ಲಂಘಿಸಿ ಪಡೆದಿರುವ ಕಾರ್ಡುಗಳನ್ನು ರದ್ದುಪಡಿಸಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
3 ವರ್ಷಗಳಲ್ಲಿ ರಾಜ್ಯಾದ್ಯಂತ ನಕಲಿ ದಾಖಲೆಗಳನ್ನು ನೀಡಿ ಅಕ್ರಮವಾಗಿ ಪಡೆದಿದ್ದ 12 ಲಕ್ಷ 47 ಸಾವಿರ 151 ಕಾರ್ಡುಗಳನ್ನು ರದ್ದುಪಡಿಸಿದೆ. ಬೆಂಗಳೂರು ಮತ್ತು ಬೆಳಗಾವಿ ನಗರಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಅಕ್ರಮ ಪಡಿತರ ಚೀಟಿಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ, ಚಿತ್ರದುರ್ಗ, ವಿಜಯಪುರ ಹಾಗೂ ಮೈಸೂರುಗಳಲ್ಲಿ 1 ಲಕ್ಷ ಕಾರ್ಡುಗಳು ರದ್ದಾಗಿವೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಬೆಂಗಳೂರು ಗ್ರಾಮಾಂತರ, ದಾವಣಗೇರೆ, ಮಂಡ್ಯ, ಹಾಸನ ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಕಾರ್ಡುಗಳು ಅನರ್ಹಗೊಂಡಿವೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಉಳಿತಾಯವಾಗಿದೆ.