Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನನಗೆ 82 ವರ್ಷ ವಯಸ್ಸಾಗಿದ್ದು, ನಾನು ಸಚಿವನಾಗಲು ಅನರ್ಹನಾಗಿದ್ದೇನೆ ಎಂದು ತುಮಕೂರು ಹಿರಿಯ ಸಂಸದ ಜಿ.ಎಸ್.ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸಂಪುಟ ಪುನಾರಚನೆಯಲ್ಲಿ ನಿಮಗೆ ಸಚಿವ ಸ್ಥಾನ ಕೈತಪ್ಪಿದೆಯಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಸಂಸದ ಜಿ.ಎಸ್.ಬಸವರಾಜು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. 81 ವರ್ಷದ ನನಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದಾರೆ. ದೇವೇಗೌಡರನ್ನು ಚುನಾವಣೆಯಲ್ಲಿ ಸೋಲಿಸಿದ್ದೇ ನನಗೆ ಮಂತ್ರಿಗಿರಿಗಿಂತ ಹೆಚ್ಚು ಎಂದು ಪ್ರತಿಕ್ರಿಯಿಸಿದ್ದಾರೆ.
ನಾನು ಹಿರಿಯ ಸಂಸದನಾಗಿರೋದು ಸತ್ಯ. ಆದರೆ ನನಗೆ ವಯಸ್ಸಾಗಿರೋದ್ರಿಂದಲೇ ಮಂತ್ರಿಗಿರಿ ತಪ್ಪಿದೆ ಹೊರತು ಬೇರೆಕಾರಣದಿಂದಲ್ಲ. ಎಂದು ಪ್ರತಿಕ್ರಿಯಿಸಿದ್ದಾರೆ.
ಶೋಭಾ ಕರಂದ್ಲಾಜೆಗೆ ಮಂತ್ರಿ ಸ್ಥಾನ ಸಿಕ್ಕಿರೋದು ಖುಷಿಯ ವಿಚಾರ ಆಕೆ ಧೈರ್ಯಶಾಲಿ ಮಹಿಳೆಯಾಗಿದ್ದಾಳೆ. ಅದರಂತೆ ಸದಾನಂದ ಗೌಡರೂ ಒಳ್ಳೆಯವರು ಆದರೂ ಸಂಪುಟ ಪುನಾರಚನೆ ಅನಿವಾರ್ಯವಾಗಿದ್ದರಿಂದ ಅವರು ರಾಜೀನಾಮೆ ಕೊಡಬೇಕಾಯಿತು ಎಂದರು.