Webdunia - Bharat's app for daily news and videos

Install App

ಕೊನೆಗೂ ಜೈಲಿನಿಂದ ಬಿಡುಗಡೆಯಾದ ರೇಣುಕಾಸ್ವಾಮಿ ಮರ್ಡರ್ ಆರೋಪಿಗಳು

Krishnaveni K
ಬುಧವಾರ, 2 ಅಕ್ಟೋಬರ್ 2024 (12:08 IST)
ತುಮಕೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಜೊತೆಗೆ ಅರೆಸ್ಟ್ ಆಗಿದ್ದ 16 ಆರೋಪಿಗಳ ಪೈಕಿ ಮೂವರು ಕೊನೆಗೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
 

ಎ15,ಎ16 ಮತ್ತು ಎ17 ಆರೋಪಿಗಳಾದ ನಿಖಿಲ್ ನಾಯಕ್, ಕೇಶವಮೂರ್ತಿ ಮತ್ತು ಕಾರ್ತಿಕ್ ಗೆ 57 ನೇ ಸಿಸಿಎಚ್ ಕೋರ್ಟ್ ಸೆಪ್ಟೆಂಬರ್ 23 ರಂದೇ ಜಾಮೀನು ಮಂಜೂರು ಮಾಡಿತ್ತು. ಈ ಮೂವರು ಆರೋಪಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿರಲಿಲ್ಲ. ಸಾಕ್ಷ್ಯ ನಾಶ ಕೇಸ್ ಮಾತ್ರ ಇತ್ತು.

ಹೀಗಾಗಿ ಮೂವರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಮೂವರಿಗೂ ಶ್ಯೂರಿಟಿ ಸಿಗದೇ ಬಿಡುಗಡೆ ಪ್ರಕ್ರಿಯೆ ನಡೆದಿರಲಿಲ್ಲ. ಶ್ಯೂರಿಟಿ ಸಿಗದೇ ಇಷ್ಟು ದಿನ ಮೂವರು ಅನಗತ್ಯವಾಗಿ ಜೈಲಿನಲ್ಲಿ ಕಾಲ ಕಳೆಯುವಂತಾಗಿತ್ತು. ಇದೀಗ ಕೊನೆಗೂ ಶ್ಯೂರಿಟಿ ವ್ಯವಸ್ಥೆಯಾಗಿದ್ದು ನಿನ್ನೆ ರಾತ್ರಿಯೇ ಜೈಲು ಅಧಿಕಾರಿಗಳಿಗೆ ಜಾಮೀನು ಪ್ರತಿ ಮೇಲ್ ಮಾಡಲಾಗಿತ್ತು.

ಇಂದು ಮೂವರೂ ಬಿಡುಗಡೆಯಾಗಿ ತುಮಕೂರು ಜೈಲಿನಿಂದ ಹೊರಬಂದಿದ್ದಾರೆ.  ಈ ಮೂಲಕ ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಮೂವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ.  ಆದರೆ ಇವರ ಮೇಲೆ ಇನ್ನೂ ಕೇಸ್ ಹಾಗೆಯೇ ಇದ್ದು ವಿಚಾರಣೆಗೆ ಹಾಜರಾಗಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments