ಬೆಂಗಳೂರು : ಸಿಎಂ ವಿರುದ್ಧ ಹೈಕಮಾಂಡ್ ಮತ್ತು ರಾಜ್ಯಪಾಲರಿಗೆ ದೂರು ನೀಡಿದ ಈಶ್ವರಪ್ಪ ವಿರುದ್ಧ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
4 ಗೋಡೆ ಮಧ್ಯೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕಿತ್ತು. ಇದರಿಂದ ಬೈಎಲೆಕ್ಷನ್ ಮೇಲೆ ಪರಿಣಾಮ ಬೀರಲ್ವಾ? ಪಕ್ಷದ ಇಮೇಜ್ ಹಾಳಾಗೋದಿಲ್ವಾ? ಈಶ್ವರಪ್ಪನಂಥ ಹಿರಿಯರೇ ಪತ್ರ ಬರೆದರೆ ಹೇಗೆ? ಎಂದು ರೇಣುಕಾಚಾರ್ಯ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಗಮನಕ್ಕೆ ಬಾರದೆ ನಿಯಮಬಾಹಿರವಾಗಿ ಶಾಸಕರಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂಬ ಈಶ್ವರಪ್ಪ ದೂರಿಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು, ಅನುದಾನಕ್ಕೆ 60 ಶಾಸಕರು ಮನವಿ ಮಾಡಿದ್ದೆವು. ಶಾಸಕರ ಮನವಿ ಪುರಸ್ಕರಿಸಿ ಸಿಎಂ ಹಣ ಕೊಟ್ಟರು ಎಂದು ತಿಳಿಸಿದ್ದಾರೆ.