Publish Date: Wed, 27 Mar 2019 (21:13 IST)
Updated Date: Wed, 27 Mar 2019 (21:15 IST)
ಗಡಿ ನಾಡು ಬೆಳಗಾವಿಯಲ್ಲಿ ಕೈ ನಾಯಕರ ಬಂಡಾಯ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ. ಏತನ್ಮಧ್ಯೆ ಸುದ್ದಿಗೋಷ್ಠಿ ನಡೆಸಿರುವ ಸಚಿವ ಸತೀಶ್ ಜಾರಕಿಹೊಳಿ ಅವರು, ರೆಬಲ್ ಶಾಸಕರಾಗಿರುವ ತಮ್ಮ ಸಹೋದರನ ನಡೆ ಬಗ್ಗೆ ಮಾತನಾಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಸಚಿವ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ರು. ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಶೇಷ ಯೋಜನೆ ಬಗ್ಗೆ ಘೋಷಣೆ ಮಾಡಿದ್ದಾರೆ. ಕಡು ಬಡವರಿಗೆ ತಿಂಗಳಿಗೆ 6 ಸಾವಿರ ನೀಡೋ ಯೋಜನೆ ಒಳ್ಳೆಯದು. ಈ ಯೋಜನೆಯಿಂದ ಬಡವರಿಗೆ ಅನುಕೂಲ ಆಗಲಿದೆ ಎಂದರು.
ಇನ್ನು, ಎಲ್ಲಾ ಪಕ್ಷದಲ್ಲಿ ಗೊಂದಲ ಸಹಜವಾಗಿದೆ ಎಂದ ಅವರು, ನಮ್ಮ ಪಕ್ಷದ ಅಸಮಾಧಾನ ಇತ್ಯರ್ಥ ಪಡಿಸುತ್ತೇವೆ ಎಂದರು.
ರೆಬಲ್ ಶಾಸಕ ರಮೇಶ ಜಾರಕಿಹೊಳಿ ತಟಸ್ಥವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಪಕ್ಷದಲ್ಲಿ ಇದು ಪಕ್ಷದ ಪರ ಕೆಲಸ ಮಾಡೋ ನಿರೀಕ್ಷೆ ಇದೆ ಅಂತ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.