ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಹೆಚ್. ಬಿ. ರಾಮು ಮಂಡ್ಯದಲ್ಲಿ ಸುಮಲತಾ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಸುಮಲತಾಗೆ ಜೈ ಎಂದ ಹೆಚ್. ಬಿ. ರಾಮು ನಡೆ ಕುತೂಹಲ ಮೂಡಿಸಿದೆ.
ಚಲುವರಾಯಸ್ವಾಮಿ ಬಣದಲ್ಲಿ ಗುರುತಿಸಿಕೊಂಡಿರೋ ಮಾಜಿ ಶಾಸಕ ರಾಮು ಮಾತನಾಡಿದ್ದು, ಮುಖ್ಯಮಂತ್ರಿಗಳೇ ಚಲುವರಾಯಸ್ವಾಮಿ ಬೆಂಬಲ ಬೇಡ ಅಂತಾ ಹೇಳಿದ್ದಾರೆ. ಈ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮತದಾರರು ಸುಮಲತಾರೇ ನಮ್ಮ ಅಭ್ಯರ್ಥಿ ಅಂತಾ ಘೋಷಣೆ ಮಾಡಿಕೊಂಡಿದ್ದಾರೆ. ನಾವು ಸುಮಲತಾ ಪರ ಕೆಲಸ ಮಾಡುತ್ತೇವೆ ಎಂದರು.
ಎಸ್. ಡಿ. ಜಯರಾಂ ನಮ್ಮ ನಾಯಕರು, ಅವರ ನಂತರ ಅಂಬರೀಶ್, ಅಂಬಿ ಋಣ ನಮ್ಮ ಮೇಲಿದೆ, ಮೂರು ಬಾರಿ ಪಕ್ಷದಿಂದ ಬಿ ಫಾರಂ ಕೊಡಿಸಿದ್ದಾರೆ. ನಾನು ಸುಮಲತಾ ಅಂಬರೀಶ್ ಪರ ಕೆಲ್ಸ ಮಾಡ್ತೀವಿ ಎಂದರು.
ನೂರಕ್ಕೆ ತೊಂಬತ್ತೈದಕ್ಕೂ ಹೆಚ್ಚು ಕಾರ್ಯಕರ್ತರು ಸುಮಲತಾ ಪರ ಇದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್ ಜೊತೆ ಮತ್ತೊಂದು ಬಾರಿ ವಿಚಾರ ವಿನಿಮಯ ಮಾಡ್ತೀವಿ ಎಂದ ಅವರು, ಈ ಜಿಲ್ಲೆಯನ್ನು ಸಾಹುಕಾರ್ ಚನ್ನಯ್ಯರಿಂದ ಹಿಡಿದು ಅಂಬರೀಶ್ ಅವರ ತನಕ ಆಡಳಿತ ನಡೆಸಿದ್ದಾರೆ. ಪಕ್ಕದ ಜಿಲ್ಲೆಯ ಯುವಕನಿಗೆ ಯಾವರೀತಿ ಕೆಲ್ಸ ಮಾಡ್ಲೀ ನಿವೇ ಹೇಳಿ ಎಂದ್ರು. ಜಿಲ್ಲೆಯ ಸ್ವಾಭಿಮಾನ ಏನಾಗ್ಬೇಕು? ಎಂದು ಪ್ರಶ್ನೆ ಮಾಡಿದ್ರು.
ಸಾತನೂರಿಗೆ ಮೊದಲು ದೇವೇಗೌಡ್ರು ಎಂಟ್ರಿ ಕೊಟ್ರು ಈಗ ಇಡೀ ಜಿಲ್ಲೆಯ ವಾತಾವರಣ ಯಾವ ರೀತಿ ಇದೆ ಎಂದ ಅವರು, ಬಿ.ಎಸ್.ಯಡಿಯೂರಪ್ಪ ಜನ್ಮಭೂಮಿ ಮಂಡ್ಯ. ಆದ್ರಿಂದ ಅವರು ಸುಮಲತಾ ಬೆಂಬಲಿಸಿ ಒಳ್ಳೆ ತೀರ್ಮಾನ ಮಾಡಿದ್ದಾರೆ ಎಂದರು.