Publish Date: Tue, 29 Aug 2023 (15:50 IST)
Updated Date: Tue, 29 Aug 2023 (16:52 IST)
ಪಿಎಸ್‌ಐ ನೇಮಕಾತಿ ಮರುಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತಾನಾಡಿದ ಅವರು, ಹಿಂದಿನ ಸರ್ಕಾರವೇ ಮರು ಪರೀಕ್ಷೆಗೆ ಆದೇಶ ನೀಡಿತ್ತು. ನಾವು ಅದರ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಕೆಲವರು ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಕೋರ್ಟ್‌ನಲ್ಲಿ ಕೇಸ್ ಇರೋದ್ರಿಂದ ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಏನ್ ತೀರ್ಪು ಬರುತ್ತೋ ಕಾದು ನೋಡೋಣ. ಇನ್ನೊಂದು ವಾರದೊಳಗೆ ತೀರ್ಪು ಬರುವ ವಿಶ್ವಾಸ ಇದೆ. ಕೋರ್ಟ್ ತೀರ್ಪಿನಂತೆ ಮರು ಪರೀಕ್ಷೆ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.