Publish Date: Fri, 30 Sep 2022 (13:57 IST)
Updated Date: Fri, 30 Sep 2022 (14:27 IST)
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿದೆ. ಈ ಏರಿಕೆಯೊಂದಿಗೆ ರೆಪೊ ದರವನ್ನು 5.9%ಗೆ ಹೆಚ್ಚಿಸಿದೆ. ಇದು ಸತತ ನಾಲ್ಕನೇ ಬಾರಿಯ ಏರಿಕೆಯಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ಮತ್ತು US ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ತಡೆಯಲು ವಿದೇಶಿ ಬಂಡವಾಳದ ಒಳಹರಿವು ಸುಧಾರಿಸಲು ಬಡ್ಡಿದರದಲ್ಲಿ 50 ಬೇಸಿಸ್ ಪಾಯಿಂಟ್ಗಳ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ವಾಹನ, ಗೃಹ, ಇತರೆ ಸಾಲಗಳ ಕಂತು, EMI ಏರಿಕೆಯಾಗಲಿದೆ.