Publish Date: Sun, 25 Sep 2022 (08:34 IST)
Updated Date: Sun, 25 Sep 2022 (08:36 IST)
ನವದೆಹಲಿ : ಇದೇ ಅಕ್ಟೋಬರ್ 1 ರಂದು ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ರಾಷ್ಟ್ರೀಯ ಬ್ರಾಡ್ಬ್ಯಾಂಡ್ ಮಿಷನ್ ಟ್ವೀಟ್ ಮಾಡಿದೆ.
ಏಷ್ಯಾದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಇಂಡಿಯಾ ಮೊಬೈಲ್ ಕಾಂಗ್ರೆಸ್, ದೂರ ಸಂಪರ್ಕ ಇಲಾಖೆ ಹಾಗೂ ಸೆಕ್ಯೂಲರ್ ಆಪರೇಟರ್ಸ್ ಸೋಸಿಯೇಷನ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಅನಾವರಣಗೊಳ್ಳಲಿದ್ದು, ಈ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.
ಕೇಂದ್ರ ಸರ್ಕಾರ ಅತ್ಯಂತ ಕಡಿಮೆ ಅವಧಿಯಲ್ಲಿ ಶೇ.80 ಪ್ರತಿಶತದಷ್ಟು 5ಜಿ ಸೇವೆ ತಲುಪಿಸುವ ಗುರಿ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿಸಿದ್ದಾರೆ.