Publish Date: Friday, 01 September 2023 (19:41 IST)
Updated Date: Friday, 01 September 2023 (19:44 IST)
ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಮಲ್ಲೇಶ್ವರ ರಾಯರ ಮಠ ಸಂಪೂರ್ಣ ಜಲಾವೃತವಾಗಿದೆ.ರಾತ್ರಿ ಸುರಿದ ಮಳೆಗೆ ರಾಯರ ಮಠಕ್ಕೆ ನೀರು ನುಗ್ಗಿದ್ದು, ಮಳೆಯ ಆರ್ಭಟಕ್ಕೆ ರಾಯರ ಮಠ ಜಲಾವೃತವಾಗಿದೆ.ಮೊಣಕಾಲಿನವರೆಗೂ ನೀರು ತುಂಬಿದ್ದು, ಗುರುವಾರ ವಿಶೇಷ ಪೂಜೆ ನಡೆಯುತ್ತಿದ್ದಾಗಲೇ ದೇವಾಲಯದ ಒಳಗೆ ನೀರು ನುಗ್ಗಿದೆ. ನೀರು ತೆರವುಗೊಳಿಸಲು ಅರ್ಚಕರು ಪರದಾಡುವಂತಾಯಿತು.