Publish Date: Fri, 01 Sep 2023 (19:20 IST)
Updated Date: Fri, 01 Sep 2023 (19:41 IST)
ಬೆಂಗಳೂರಿನ ದೇವನಹಳ್ಳಿಯಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿದೆ. ಬೆಟ್ಟಹಲಸೂರು, ವಿದ್ಯಾನಗರ ಕ್ರಾಸ್ ಸಮೀಪದ ರಸ್ತೆ ಜಲಾವೃತವಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿತ್ತು..ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಏರ್ಪೋರ್ಟ್ಗೆ ಹೋಗುವ ವಾಹನಗಳಿಗೆ ತೊಂದರೆ ಉಂಟಾಯಿತು. ತುಂಬಿದ ರಸ್ತೆಗಳಲ್ಲೇ ವಾಹನಗಳು ಸಂಚರಿಸುವ ದುಸ್ಥಿತಿ ಎದುರಾಯಿತು.